ಐಗೂರು, ಜು. ೨೮: ಐಗೂರು ಗ್ರಾಮದ ಬಸ್ ತಂಗುದಾಣಗಳು ಕಳೆದ ಒಂದು ತಿಂಗಳ ಹಿಂದೆ ಸ್ವಚ್ಛಗೊಂಡ ಬಳಿಕ ಮತ್ತೊಮ್ಮೆ ಮದ್ಯದ ಖಾಲಿ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯದಿಂದ ಕಸದ ತಾಣವಾಗಿದೆ. ಇವುಗಳನ್ನು ಹಾಸನ ಜಿಲ್ಲೆಯ ರಾಜ, ಕುಮಾರ ಮತ್ತು ಸಿದ್ದ ಎಂಬ ಕಾರ್ಮಿಕರು ಸಂಗ್ರಹಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯ ‘ಶಕ್ತಿ’ಯ ಗಮನಕ್ಕೆ ಬಂದಿದೆ.

ಹೊಟ್ಟೆಪಾಡಿಗಾಗಿ ಹಾಸನ ಜಿಲ್ಲೆಯಿಂದ ಐಗೂರು ಗ್ರಾಮದವರೆಗೆ ಸಂಚರಿಸುವ ಈ ಮೂರು ಜನ ಕಾರ್ಮಿಕರು ಕಸ ಸಂಗ್ರಹಿಸುವ ಮೂಲಕ ಸ್ವಚ್ಛತೆಗೆ ಮೌನವಾಗಿ ಕೊಡುಗೆ ನೀಡುತ್ತಿದ್ದಾರೆ.

ಕಾಜೂರು ಜಂಕ್ಷನ್‌ನ ತಂಗುದಾಣವನ್ನು ಸ್ವಚ್ಛಗೊಳಿಸಿದ ಬಳಿಕ ತಂಗುದಾಣದೊಳಗೆ ಕುಳಿತು ಮನೆಯಿಂದ ತಂದಿದ್ದ ಉಪಹಾರ ಸೇವಿಸಿದರು. ಬಳಿಕ ಸಂಗ್ರಹಿಸಿದ ತ್ಯಾಜ್ಯವನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊAಡು ಹಾಸನದತ್ತ ಪ್ರಯಾಣ ಬೆಳೆಸಿದರು.

ಕಳೆದ ಒಂದು ತಿಂಗಳ ಹಿಂದಷ್ಟೇ ಐಗೂರು ಜಂಕ್ಷನ್‌ನ ತಂಗುದಾಣವನ್ನು ಧರಣಿ ಸ್ವಸಹಾಯಕ ಸಂಘದ ಮಹಿಳಾ ಸದಸ್ಯರು ಹಾಗೂ ಕಾಜೂರು ಜಂಕ್ಷನ್‌ನ ತಂಗುದಾಣವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಸದಸ್ಯರು ಸ್ವಚ್ಛಗೊಳಿಸಿದ್ದರು.

ಆದರೆ ಕೆಲವೇ ದಿನಗಳಲ್ಲಿ ಪಾನ ಪ್ರಿಯರು ಮತ್ತೆ ತಂಗುದಾಣವನ್ನು ಖಾಲಿ ಮದ್ಯದ ಬಾಟಲಿ ಮತ್ತು ತ್ಯಾಜ್ಯದಿಂದ ತುಂಬಿಸಿದ್ದಾರೆ.

ಚಿಂದಿ ಆಯುವ ಕಾರ್ಮಿಕರು ಹಾಗೂ ಸೇವಾ ಸಂಘಟನೆಗಳಿAದ ಅಶುಚಿತ್ವಗೊಳಿಸುವವರು ಪಾಠ ಕಲಿಯಬೇಕಿದೆ. -ಸುಕುಮಾರ್