ಮಡಿಕೇರಿ, ಜು. ೨೮: ಕಳೆದ ಹಲವು ವರ್ಷಗಳಿಂದ ಸುಂಟಿಕೊಪ್ಪದಲ್ಲಿ ಸೂಕ್ತ ಬಸ್ ತಂಗುದಾಣವಿಲ್ಲದ ಕಾರಣ, ಮೈಸೂರು ಅಥವಾ ಮಡಿಕೇರಿ ಕಡೆಗೆ ತೆರಳಬೇಕಾದ ಪ್ರಯಾಣಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯವಾಗಿ ಸ್ಥಳೀಯ ಅಂಗಡಿಗಳ ಮುಂಭಾಗದ ಸೂರಿನಡಿಯಲ್ಲೇ ಬಸ್ಸಿಗಾಗಿ ಕಾಯಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಸಂಬAಧಪಟ್ಟ ಗ್ರಾಮ ಪಂಚಾಯಿತಿ ಈ ಗಂಭೀರ ಸಮಸ್ಯೆಯ ಕಡೆಗೆ ಸಂಪೂರ್ಣ ನಿರ್ಲಕ್ಷö್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಕೊಳಚೆ ನೀರೇ ಹೆದ್ದಾರಿ ಸತ್ಕಾರ

ಅಂಗಡಿಗಳ ಮುಂಭಾಗದ ರಸ್ತೆ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಅಲ್ಪ ಮಳೆಯಾದರೂ ಸಾಕು, ನೀರೆಲ್ಲವೂ ರಸ್ತೆ ಬದಿಯಲ್ಲೇ ಮಡುಗಟ್ಟಿ ಕೊಳಚೆ ಹೊಂಡದAತೆ ಮಾರ್ಪಡುತ್ತದೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಇದು ನಿತ್ಯದ ದರ್ಶನವಾಗಿದೆ. ಬಸ್ ಬಂದಾಗ ತರಾತುರಿಯಲ್ಲಿ ಓಡುವ ವಿದ್ಯಾರ್ಥಿಗಳು ಆಯತಪ್ಪಿ ಈ ಕೊಳಚೆ ನೀರನ್ನು ತುಳಿಯುವುದು, ಕೆಲವೊಮ್ಮೆ ಜಾರಿ ಬಿದ್ದು ಅವರ ಪಠ್ಯ ಪುಸ್ತಕ ಹಾಗೂ ಬ್ಯಾಗ್‌ಗಳು ಕೊಳಚೆ ಪಾಲಾಗುತ್ತಿರುವುದು ಇಲ್ಲಿನ ನಿತ್ಯದ ಕರುಣಾಜನಕ ದೃಶ್ಯವಾಗಿದೆ. ಶಾಶ್ವತವಾಗಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣವಾಗುವವರೆಗೆ ಗ್ರಾಮ ಪಂಚಾಯಿತಿಯು ತಕ್ಷಣವೇ ಎಚ್ಚೆತ್ತುಕೊಂಡು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿ ಕೊಳಚೆ ನೀರು ನಿಲ್ಲದಂತೆ ಸೂಕ್ತ ಹರಿವಿನ ವ್ಯವಸ್ಥೆ ಮಾಡಬೇಕು. ಇಲ್ಲವೇ, ನೀರು ನಿಲ್ಲುವ ಜಾಗದ ಉದ್ದಕ್ಕೂ ಸಾರ್ವಜನಿಕರ ಅನುಕೂಲಕ್ಕಾಗಿ ಕಬ್ಬಿಣದ ಹಾಸನ್ನು ಅಳವಡಿಸಿ ಯಾದರೂ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- ಎಂ.ಇ. ಮಹಮ್ಮದ್