ಮಡಿಕೇರಿ, ಜು. ೨೮: ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದ ಕಟ್ಟಿ ಮಂದಯ್ಯ ಅವರು ವೃದ್ಧಾಪ್ಯ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ತೀರ್ಮಾನವಾಗಿ ಜಿಲ್ಲಾಧ್ಯಕ್ಷರಾಗಿ ಸಿ.ಎನ್. ವಿಶ್ವನಾಥ್ ಅವರು ಒಮ್ಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಎಂ.ಪಿ. ಉತ್ತಪ್ಪ, ಕಾರ್ಯದರ್ಶಿಯಾಗಿ ಕೆ.ಪಿ. ಕಾವೇರಪ್ಪ, ಸಹಕಾರ್ಯದರ್ಶಿಯಾಗಿ ಎಸ್.ಕೆ. ಸ್ವಾತಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಸ್. ನರೇಂದ್ರ, ಸಲಹೆಗಾರರಾಗಿ ಸಿ.ಎಂ. ಬೋಪಣ್ಣ, ಖಜಾಂಚಿಯಾಗಿ ಜಿ.ಎನ್. ಪೂವಪ್ಪ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಮುಕ್ಕಾಟಿರ ದಾದ ಬೋಪಯ್ಯ, ಕೊದೇಂಗಡ ವಿಠಲ, ಗುಮ್ಮಟಿರ ಅಕ್ಕಮ್ಮ, ಕಾಳಿಮಾಡ ದಿಲೀಪ್, ಬಾಚಂಗಡ ಲೀಲಾ, ಎಂ.ಎA. ವಾಣಿ ಮತ್ತು ಎಂ.ಬಿ. ರವಿಶಂಕರ್ ಆಯ್ಕೆಯಾದರು.