ಚೆಯ್ಯAಡಾಣೆ, ಜು. ೨೮: ಗುಂಡಿಕೆರೆ ಮಸೀದಿಯ ಸಭಾಂಗಣದಲ್ಲಿ ಎಸ್‌ಎಸ್‌ಎಫ್ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಜಿಲ್ಲೆಯ ವಿವಿಧ ಡಿವಿಷನ್‌ಗಳಿಂದ ೬೦೦ಕ್ಕೂ ಅಧಿಕ ವಿದ್ಯಾರ್ಥಿಗಳು ೧೬೦ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

೧೯೦೭ ಅಂಕಗಳೊAದಿಗೆ ವೀರಾಜಪೇಟೆ ಡಿವಿಷನ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ೧೭೨೦ ಅಂಕಗಳೊAದಿಗೆ ಸೋಮವಾರಪೇಟೆ ಡಿವಿಷನ್ ರನ್ನರ್ ಅಪ್ ಸ್ಥಾನ ಪಡೆದರೆ, ೧೬೭೬ ಅಂಕಗಳೊAದಿಗೆ ಮಡಿಕೇರಿ ಡಿವಿಷನ್ ತೃತೀಯ ಸ್ಥಾನಗಳಿಸಿತು.

ಸ್ಟಾರ್ ಆಫ್ ದಿ ಫೆಸ್ಟ್ ಪ್ರಶಸ್ತಿಯನ್ನು ವೀರಾಜಪೇಟೆ ಡಿವಿಷನ್‌ನ ಜುನೈದ್ ಅಲ್ ಐದರೂಸಿ ಪಡೆದರೆ, ಪೆನ್ ಆಫ್ ದಿ ಫೆಸ್ಟ್ ಪ್ರಶಸ್ತಿ ಬಷೀರ್ ಅವರಿಗೆ ಲಭಿಸಿತು.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ ೫ ಮತ್ತು ೬ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದು, ಅಲ್ಲಿ ವಿಜೇತರಾದವರು ರಾಷ್ಟçಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ.

ಸಾಹಿತ್ಯೋತ್ಸವ ಶ್ಲಾಘನೀಯ

ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಅನಾವರಣಗೊಳಿಸಬೇಕು ಎಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಚ್ಚುರ ರವೀಂದ್ರ ಹೇಳಿದರು.

ಸಾಹಿತ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗ್ರಾಮ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ಆಯೋಜಿಸಿರುವ ಸಾಹಿತ್ಯೋತ್ಸವ ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಕಮರುದ್ದೀನ್ ಅನ್ವಾರಿ ಸಖಾಫಿ ವಹಿಸಿದ್ದರು. ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ, ಸಂಘಟನೆಯನ್ನು ಆರಂಭಿಸುವುದು ಸುಲಭವಾದರೂ ಅದನ್ನು ಸೈದ್ಧಾಂತಿಕ ಬದ್ಧತೆಯೊಂದಿಗೆ ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತನ್ನ ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಅದರ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಸ್‌ಎಫ್ ಕಳೆದ ೫೩ ವರ್ಷಗಳಿಂದ ವಿದ್ಯಾರ್ಥಿ-ಯುವಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತಾ, ಧರ್ಮ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ತಲೆಮಾರನ್ನು ರೂಪಿಸುತ್ತಿದೆ ಎಂದು ಹೇಳಿದರು. ಮಾದಕ ವಸ್ತುಗಳ ವ್ಯಸನದತ್ತ ಸಾಗುತ್ತಿರುವ ಯುವ ಸಮುದಾಯವನ್ನು ಸಮಾಜಕ್ಕೆ ಪೂರಕವಾದ ನಾಗರಿಕರನ್ನಾಗಿ ರೂಪಿಸುವಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಅಖಿಲ ಭಾರತ ಪತ್ರಕರ್ತರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಹನೀಫ್ ಮಾತನಾಡಿ, ಭಾಷೆಗಳ ಸೌಂದರ್ಯ ಮತ್ತು ಸಾಹಿತ್ಯದ ಮಹತ್ವವನ್ನು ಅರಿಯಲು ಸಾಹಿತ್ಯೋತ್ಸವ ಉತ್ತಮ ವೇದಿಕೆಯಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.

ಎಸ್‌ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫಿಲ್ ಸಅದಿ, ಕೊಡಗು ಸುನ್ನಿ ವೆಲ್ಫೇರ್ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಹಾಗೂ ಉಮ್ಮರ್ ಸಖಾಫಿ ಎಡಪಾಲ ಮಾತನಾಡಿದರು.

೨೦೨೭ರ ೧೫ನೇ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವವನ್ನು ಎಮ್ಮೆಮಾಡುವಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಸಂದರ್ಭದಲ್ಲಿ ಎಸ್‌ಎಸ್‌ಎಫ್ ಜಿಲ್ಲಾ ಪದಾಧಿಕಾರಿಗಳು ಸಂಘಟನೆಯ ಧ್ವಜವನ್ನು ಮುಂದಿನ ವರ್ಷದ ಆತಿಥೇಯರಾದ ಎಮ್ಮೆಮಾಡು ಸಂಘ ಕುಟುಂಬದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಸೈಫುದ್ದೀನ್ ಅಲ್ ಐದರೂಸಿ ತಂಙಳ್, ಸಯ್ಯಿದ್ ಶಿಯಾಬ್ ತಂಙಳ್, ಎಸ್ ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ, ಎಸ್‌ಜೆಎಂ ಜಿಲ್ಲಾ ಕಾರ್ಯದರ್ಶಿ ಶಂಸುದ್ದಿನ್ ಅಮ್ಜದಿ, ಗುಂಡಿಕೆರೆ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹಾಜಿ, ಖತೀಬ್ ಇಲ್ಯಾಸ್ ಅಮ್ಜದಿ, ಮಾಜಿ ಅಧ್ಯಕ್ಷರಾದ ಅಬ್ಬಾಸ್, ಉಮ್ಮರ್ ಹಾಜಿ, ಕೋಶಾಧಿಕಾರಿ ಮೊಯ್ದು, ಉಪಾಧ್ಯಕ್ಷ ಆಲಿ, ಕಾರ್ಯದರ್ಶಿ ಇಸ್ಮಾಯಿಲ್, ಬದರುದ್ದಿನ್, ಇಬ್ರಾಹಿಂ ಲತೀಫಿ, ಮೋದ್ದಿನ್ ಬಾಳುಗೋಡು, ವೆಲ್ಫೇರ್‌ನ ನಿಝಾರ್, ನಿವೃತ್ತ ಸೈನಿಕ ಉಮ್ಮರ್, ರಝಾಕ್, ಸುವರ್ಣ ಎಡಿಟರ್ ಹಬೀಬ್, ಎಸ್‌ಎಸ್‌ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್, ಕೋಶಾಧಿಕಾರಿ ನವಾಜ್ ಮದನಿ, ಸ್ವಾಗತ ಸಮಿತಿಯ ಚೆರ್ಮೆನ್ ಅಹ್ಮದ್ ಮದನಿ, ಕನ್ವಿನರ್ ಶಫೀಕ್ ಮತ್ತಿತರರು ಉಪಸ್ಥಿತರಿದ್ದರು. ಸೈಫುದ್ದೀನ್ ತಂಙಳ್ ಪ್ರಾರ್ಥಿಸಿ, ಜುನೈದ್ ಸ್ವಾಗತಿಸಿ, ರಾಶೀದ್ ಅಹ್ಸನಿ ವಂದಿಸಿದರು.