ಕುಶಾಲನಗರ, ಜು ೨೯: ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಸೇವಾ ಮನೋಭಾವದೊಂದಿಗೆ ಆತಿಥ್ಯ ನೀಡಿದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕಾಣಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದರಾದ ಐಮುಡಿಯಂಡ ರಾಣಿ ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರ ಸಮೀಪ ನೂತನವಾಗಿ ಆರಂಭಗೊAಡ ದೊನ್ನೆ ಬಿರಿಯಾನಿ ಪ್ಯಾಲೇಸ್ ಉದ್ಘಾಟನೆ ಮಾಡಿ ಮಾತನಾಡಿದರು. ಪ್ರವಾಸಿಗರಿಗೆ ಭದ್ರತೆ ಜೊತೆಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಬಗ್ಗೆ ವ್ಯಾಪಾರ ಉದ್ಯಮಿಗಳು ಕಾಳಜಿ ವಹಿಸಬೇಕಾಗಿದೆ ಎಂದರು.

ಈ ಸಂದರ್ಭ ಉದ್ಯಮಿ ಮುಂಡAಡ ಪಿ.ಬೋಪಯ್ಯ, ವಾಣಿ ಬೋಪಯ್ಯ, ವರುಣ್ ಬೋಪಯ್ಯ, ಬಿರಿಯಾನಿ ಪ್ಯಾಲೆಸ್ ಬ್ರಾಂಡ್ ಮುಖ್ಯಸ್ಥರಾದ ವರುಣ್ ಗೌಡ, ಜೀವನ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್.ಚAದ್ರಮೋಹನ್, ಬೆಳಗಾರರಾದ ಮ್ಯಾಕ್ ಮಾಚಯ್ಯ, ಕುಶಾಲನಗರ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ, ಪತ್ರಕರ್ತೆ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.