ಐಗೂರು, ಜು. ೨೯: ಐಗೂರಿನ ನೂತನ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವಾಗಿ ಕಾಜೂರು ರಸ್ತೆ ಮುಖಾಂತರ ಕಳೆದ ೯ ತಿಂಗಳಿನಿAದ ವಾಹನಗಳು ಸಂಚರಿಸುತ್ತಿದ್ದು, ಇದೀಗ ಈ ಮಾರ್ಗ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ.

ಐಗೂರಿನ ಪಾಷಾಣಮೂರ್ತಿ ದೇವಾಲಯದಿಂದ ನಿಸರ್ಗ ಜಂಕ್ಷನ್‌ವರೆಗೆ ರಸ್ತೆಯಲ್ಲಿ ಗುಂಡಿಗಳಾಗಿದ್ದು, ಇಲ್ಲಿ ಸಂಚರಿಸುವ ವಾಹನಗಳ ಬಿಡಿ ಭಾಗಗಳು ಅಲ್ಲಲ್ಲಿ ಕಳಚಿ ಬೀಳುತ್ತಿವೆ. ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ, ಆಟೋ ಮತ್ತು ಬಸ್ ಚಾಲಕರು ಹೆದ್ದಾರಿ ರಸ್ತೆ ಸಂಪರ್ಕಿಸಲು ೪ ಕಿಲೋಮೀಟರ್ ಹೆಚ್ಚುವರಿ ದೂರ ಪ್ರಯಾಣಿಸಬೇಕಾಗಿದ್ದು, ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

- ಸುಕುಮಾರ್