ವೀರಾಜಪೇಟೆ, ಜು. ೨೯: ವರದಕ್ಷಿಣೆ ಕಿರುಕುಳ ಪ್ರಕರಣ ಸಂಬAಧಿಸಿದAತೆ ಆರೋಪಿಗೆ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಸಜೆ ಹಾಗೂ ಹತ್ತು ಸಾವಿರ ದಂಡ ವಿಧಿಸಿದೆ.
ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಟೋಳಿ ಹೆಗ್ಗಳದ ರಾಮನಗರ ನಿವಾಸಿ ಗೋಪಾಲರಾಜು ಎಂಬಾತ ೨೪.೦೫.೨೦೦೦ ರಂದು ಕಮಲ ಎಂಬವರನ್ನು ಮದುವೆಯಾಗಿದ್ದು, ಮೊದಲ ಪತ್ನಿ ಜೀವಂತ ಇರುವಾಗಲೇ, ಪತ್ನಿ ಮೃತಪಟ್ಟಿರುವುದಾಗಿ ಹೇಳಿ ೨೫.೦೩.೨೦೧೧ ರಂದು ಕಾಮಾಕ್ಷಿ ಅಲಿಯಾಸ್ ಗಾಯತ್ರಿ ಎಂಬವರಿAದ ಒಂದು ಲಕ್ಷ ವರದಕ್ಷಿಣೆ ಪಡೆದುಕೊಂಡು ಹುಣಸೂರಿನ ಪರಸಯ್ಯನ ಕಲ್ಯಾಣ ಮಂಟಪದಲ್ಲಿ ಮರು ಮದುವೆಯಾಗಿದ್ದ. ಎರಡು ವರ್ಷಗಳ ನಂತರ ಎರಡನೇ ಪತ್ನಿ ಕಾಮಾಕ್ಷಿ ಗಾಯತ್ರಿಗೆ ಇನ್ನಷ್ಟು ವರದಕ್ಷಿಣೆ ಹಣ ತರುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದ.
೨೩.೦೫.೨೦೧೫ ರಂದು ತನ್ನನ್ನು ಹಾಗೂ ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ಬೇರೆ ಬೇರೆ ಕೋಣೆಯಲ್ಲಿ ಕೂಡಿ ಹಾಕಿ ಒಂಟಿ ನಳಿಕೆ ಕೋವಿಯಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಎರಡನೇ ಪತ್ನಿ ಕಾಮಾಕ್ಷಿ ಗಾಯತ್ರಿ ದೂರು ನೀಡಿದ್ದರು. ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಆರೋಪಿಯ ವಿರುದ್ದ ೪೯೪, ೪೯೮(ಎ), ೩೪೨, ೫೦೬, ೫೦೯, ಭಾ.ದಂ.ಸA ರೆ/ವಿ ೩, ೪, ೬ ರ ಅನ್ವಯ ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ಎ. ಕುಮಾರ್ ಅವರು ಭಾರತ ದಂಡ ಸಂಹಿತೆ ಕಲಂ ೪೮೮(ಎ) ಪ್ರಕಾರ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಜಿ ಚೈತ್ರ ವಾದ ಮಂಡಿಸಿದ್ದರು.