ವೀರಾಜಪೇಟೆ, ಜು.೩೦: ಅಮ್ಮತ್ತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ‘ಅಕ್ಷೋಭ್ಯ ಫೌಂಡೇಶನ್’ ವತಿಯಿಂದ ಬೆಂಗಳೂರಿನ ಅವಿನ್ ಸಿಸ್ಟಮ್ಸ್ ಪ್ರೆöÊವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ಹಾಗೂ ಅಗತ್ಯ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದರೊಂದಿಗೆ, ಪರಿಸರ ನೈರ್ಮಲ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಪರಿಸರ ಸಂಘದ ಸಹಕಾರದೊಂದಿಗೆ ಶಾಲಾ ಆವರಣ ಮತ್ತು ಮೈದಾನವನ್ನು ಸ್ವಚ್ಛವಾಗಿಡಲು ಅನುಕೂಲವಾಗುವಂತೆ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ನಾಲ್ಕು ಕಸದ ಬುಟ್ಟಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಕ್ಷೋಭ್ಯ ಫೌಂಡೇಶನ್ನ ವ್ಯವಸ್ಥಾಪಕರಾದ ಅನಿತಾ ಹಾಗೂ ಅವರ ಕುಟುಂಬದವರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.