ಸೋಮವಾರಪೇಟೆ, ಜು. ೩೧: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಆದೇಶದ ಮೇರೆ ಪರಿಸರ (ನಿರ್ಮಾಣ ಮತ್ತು ನೆಲಸಮ) ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು, ನಿಯಮ ಉಲ್ಲಂಘಿಸಿದರೆ ದಂಡದೊAದಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಪ್ರಕಟಣೆ ಎಚ್ಚರಿಕೆ ನೀಡಿದೆ.

ನೂತನ ಅಧಿಸೂಚನೆ ಅನ್ವಯದಂತೆ ನಿರ್ಮಾಣ ಮತ್ತು ನೆಲಸಮ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಮರುಬಳಕೆ ಹಾಗೂ ಮರುಸಂಸ್ಕರಣೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ. ಸಾರ್ವಜನಿಕರು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳು ನಿರ್ಮಾಣ, ನೆಲಸಮ, ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಂದ ಉಂಟಾಗುವ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಸಂಗ್ರಹಿಸಬೇಕು. ಕಾಂಕ್ರೀಟ್, ಇಟ್ಟಿಗೆ, ಲೋಹ, ಮರ, ಗಾಜು, ಪ್ಲಾಸ್ಟಿಕ್ ಹಾಗೂ ಮಣ್ಣನ್ನು ಪ್ರತ್ಯೇಕವಾಗಿ ವಿಂಗಡಿಸಿ ಅಧಿಕೃತ ಸಂಗ್ರಹಣಾ ಕೇಂದ್ರ ಅಥವಾ ಮರುಸಂಸ್ಕರಣಾ ಘಟಕಕ್ಕೆ ಒಪ್ಪಿಸಬೇಕು ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ರಸ್ತೆ, ಖಾಲಿ ಜಾಗ, ಕಾಲುವೆ, ಕೆರೆ, ನದಿ, ಸಾರ್ವಜನಿಕ ಸ್ಥಳ ಅಥವಾ ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ತ್ಯಾಜ್ಯ ಎಸೆಯುವುದು ಕಾನೂನುಬಾಹಿರವಾಗಿದೆ. ದೊಡ್ಡ ನಿರ್ಮಾಣ ಯೋಜನೆಗಳು ನಿರ್ಮಾಣ ಮತ್ತು ನೆಲಸಮತ್ಯಾಜ್ಯ ನಿರ್ವಹಣಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು. ನಿರ್ಮಾಣ ಸಾಮಗ್ರಿಗಳ ಉತ್ಪಾದಕರು ಹಾಗೂ ಸಂಬAಧಿತ ಸಂಸ್ಥೆಗಳು ವಿಸ್ತರಿತ ಉತ್ಪಾದಕರ ಜವಾಬ್ದಾರಿನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪರಿಸರ ಪರಿಹಾರ ನಿಯಮದಡಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ನಿರ್ಮಾಣ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅಧಿಕೃತ ಸಂಗ್ರಹಣಾ ವ್ಯವಸ್ಥೆಯನ್ನು ಮಾತ್ರ ಬಳಸಬೇಕು. ಮರು ಬಳಕೆ ಮತ್ತು ಮರು ಸಂಸ್ಕರಣೆಗೆ ಉತ್ತೇಜನ ನೀಡಬೇಕು. ಸ್ವಚ್ಛ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ನಗರ ನಿರ್ಮಾಣಕ್ಕೆ ಸಹಕರಿಸಬೇಕೆಂದು ಕೃಷ್ಣಪ್ರಸಾದ್ ಮನವಿ ಮಾಡಿದ್ದಾರೆ.