ಪುತ್ತರಿರ ಕರುಣ್ ಕಾಳಯ್ಯ

ಮಡಿಕೇರಿ, ಜು. ೩೧: ದುಬಾರೆ ಸಾಕಾನೆ ಶಿಬಿರದಲ್ಲಿ ಸಂಭವಿಸಿದ ದುರಂತದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ, ಕೊಡಗಿನ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಹಾರಂಗಿ ಅಣೆಕಟ್ಟು ಸಮೀಪದ ಸಾಕಾನೆ ಶಿಬಿರದಲ್ಲಿ ಬಲಿಷ್ಠ ಕಬ್ಬಿಣದ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ.

ಇತ್ತೀಚೆಗೆ ದುಬಾರೆ ಶಿಬಿರದಲ್ಲಿ ಕಂಜನ್ ಹಾಗೂ ಮಾರ್ತಾಂಡ ಸಾಕಾನೆಗಳ ಕಾಳಗದ ವೇಳೆ ಸಿಲುಕಿಕೊಂಡು ಚೆನ್ನೆöÊ ಮೂಲದ ಮಹಿಳಾ ಪ್ರವಾಸಿಯೊಬ್ಬರು ಮೃತಪಟ್ಟ ಘಟನೆ ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಅರಣ್ಯ ಇಲಾಖೆ ಎಲ್ಲಾ ಸಾಕಾನೆ ಶಿಬಿರಗಳ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಹೊಸ ಎಸ್‌ಒಪಿ (ಸ್ಟಾö್ಯಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನುಸಾರ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಹಾರಂಗಿ ಶಿಬಿರದಲ್ಲಿ ಸುಮಾರು ೪೦ ಮೀಟರ್ ಉದ್ದದ ಬಲಿಷ್ಠ ಕಬ್ಬಿಣದ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಕಬ್ಬಿಣದ ಕಂಬಗಳನ್ನು ನೆಲದಲ್ಲಿ ಆಳವಾಗಿ ಹೂತು ಕಾಂಕ್ರೀಟ್‌ನಿAದ ಭದ್ರಪಡಿಸಿ, ದಪ್ಪ ಕಬ್ಬಿಣದ ಸಲಕೆಗಳನ್ನು ಅಡ್ಡಲಾಗಿ ಜೋಡಿಸುವ ಮೂಲಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗೆ ಸುಮಾರು ರೂ೪.೮೦ ಲಕ್ಷ ವೆಚ್ಚವಾಗಲಿದೆ.

ಹೊಸ ವ್ಯವಸ್ಥೆಯಲ್ಲಿ ಪ್ರವಾಸಿಗರು ಮತ್ತು ಸಾಕಾನೆಗಳ ನಡುವೆ ಸುಮಾರು ೧೦ ಮೀಟರ್ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗುತ್ತದೆ. ಶಿಬಿರದಲ್ಲಿರುವ ೬ ಸಾಕಾನೆಗಳನ್ನು ಸುರಕ್ಷಿತ ವಲಯದಲ್ಲೇ ಇರಿಸಲಾಗುತ್ತಿದ್ದು, ಪ್ರವಾಸಿಗರು ಬ್ಯಾರಿಕೇಡ್‌ನ ಹಿಂದಿನಿAದಲೇ ಅವುಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತದೆ.

ಶಿಬಿರದಲ್ಲಿ ರೆಡ್, ಆರೆಂಜ್ ಹಾಗೂ ಗ್ರೀನ್ ವಲಯಗಳನ್ನು ಗುರುತಿಸಿ ಪ್ರವಾಸಿಗರ ಸಂಚಾರಕ್ಕೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲಾಗಿದೆ. ಅಪಾಯದ ವಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಸಿಬ್ಬಂದಿ ಮಾತ್ರ ಪ್ರವೇಶಿಸಲಿದ್ದಾರೆ.

ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಶಿಬಿರದ ವಿವಿಧ ಭಾಗಗಳಲ್ಲಿ ಹೈ ಡೆಫಿನಿಷನ್ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಕ್ಯಾಮರಾಗಳನ್ನು ನಿಯಂತ್ರಣ ಕೊಠಡಿಗೆ ಸಂಪರ್ಕಿಸಿ, ಸಾಕಾನೆಗಳ ಚಲನವಲನ ಹಾಗೂ ಪ್ರವಾಸಿಗರ ಸಂಚಾರದ ಮೇಲೆ ನಿರಂತರ ನಿಗಾ ವಹಿಸಲಾಗುತ್ತದೆ.

ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಆಗಸ್ಟ್ ಮೊದಲ ವಾರದಿಂದ ಹಾರಂಗಿ ಸಾಕಾನೆ ಶಿಬಿರವನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯುವ ಸಾಧ್ಯತೆ ಇದೆ. ಹೊಸ ಭದ್ರತಾ ವ್ಯವಸ್ಥೆಯಿಂದ ಯಾವುದೇ ಅನಾಹುತ ಸಂಭವಿಸದAತೆ ತಡೆಯುವುದರ ಜೊತೆಗೆ ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಸುಗಮ ವೀಕ್ಷಣೆಯ ಅನುಭವ ಕಲ್ಪಿಸುವುದು ಅರಣ್ಯ ಇಲಾಖೆಯ ಉದ್ದೇಶವಾಗಿದೆ.

ಇದೇ ಮಾದರಿಯ ಸುರಕ್ಷತಾ ವ್ಯವಸ್ಥೆಯನ್ನು ರಾಜ್ಯದ ಇತರ ಸಾಕಾನೆ ಶಿಬಿರಗಳಲ್ಲೂ ಜಾರಿಗೊಳಿಸಲು ಇಲಾಖೆ ಮುಂದಾಗಿದೆ. ಈಗಾಗಲೇ ದುಬಾರೆ ಸಾಕಾನೆ ಶಿಬಿರದಲ್ಲಿ ಹೊಸ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಂಡು, ಪ್ರವಾಸಿಗರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಇಲಾಖೆ ಕ್ರಮ ಕೈಗೊಂಡಿದೆ.