ಮಡಿಕೇರಿ, ಆ. ೧: ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ-ಪೊನ್ನಪ್ಪಸAತೆ ರಸ್ತೆಯ ೬.೨೫ ಕಿ.ಮೀ. ರಿಂದ ೬.೬೫ ರವರೆಗೆ ಸಿ.ಸಿ. ರಸ್ತೆ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಆಗಸ್ಟ್ ೨೮ ರವರೆಗೆ ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಪೊನ್ನಂಪೇಟೆಯಿAದ-ನಲ್ಲೂರಿಗೆ (ಪೊನ್ನಂಪೇಟೆ-ಬೆಕ್ಕೆಸೊಡ್ಲೂರು ಮಾರ್ಗ), ಪೊನ್ನಂಪೇಟೆಯಿAದ-ಪೊನ್ನಪ್ಪಸAತೆಗೆ (ಕೋಣನಕಟ್ಟೆ ಮಾಯಾಮುಡಿ ಬಾಳಾಜಿ-ಜೋಡುಬೆಟ್ಟಿ ಮಾರ್ಗ) ಈ ಮಾರ್ಗಗಳನ್ನು ಬಳಸಬೇಕೆಂದು ತಿಳಿಸಿದ್ದಾರೆ.