ಇಂದು ಕೊಡಗಿನಾದ್ಯಂತ ಅಂದರೆ ಆಗಸ್ಟ್ ೩ ರಂದು ಎಂದರೆ ಆಟಿ ತಿಂಗಳ ೧೮, ಆಟಿ ಮದ್ದು ಸೊಪ್ಪು ಅದರಿಂದ ಪಾಯಸ ಹಾಗೂ ವಿವಿಧ ಖಾದ್ಯಗಳನ್ನು ಮಾಡುತ್ತಾರೆ.
ಪಾಯಸ ಮಾಡುವ ವಿಧಾನ
ಕಾಡಿನಿಂದ ಸೊಪ್ಪನ್ನು ತಂದು ಹುಳಗಳನ್ನು ತೆಗೆದು ಎರಡು ಮೂರು ಬಾರಿ ತೊಳೆಯಬೇಕು. ತೊಳೆದ ನಂತರ ಸೊಪ್ಪನ್ನು ಜಜ್ಜಿ ಒಂದು ಪಾತ್ರೆಯಲ್ಲಿ ಹಾಕಿ ಬೇಕಾದಷ್ಟು ನೀರು ಸೇರಿಸಿ ಅದನ್ನು ಪರಿಮಳ ಬರುವವರೆಗೆ ಬೇಯಿಸಬೇಕು. ನಂತರ ಸೊಪ್ಪಿನ ನೀರನ್ನು ಬಸಿದು, ಆ ನೀರಿನಿಂದ ಪಾಯಸ ಮಾಡಲಾಗುತ್ತದೆ. ಅದನ್ನು ಜೇನು ಮತ್ತು ತುಪ್ಪ ಸೇರಿಸಿ ತಿನ್ನಬೇಕು.
ಆ ಮದ್ದು ಸೊಪ್ಪಿನ ನೀರಿಗೆ ೪ ಲೀಟರ್ ನೀರಿಗೆ ಒಂದು ಸೇರು ಅಕ್ಕಿ ಹಾಗೂ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಬೇಯಿಸಬೇಕು.
ಈ ದಿನ ಕೊಡಗಿನ ಎಲ್ಲೆಡೆ ಈ ಮದ್ದು ಸೊಪ್ಪಿನ ಪರಿಮಳ ಬರುತ್ತದೆ. ಈ ನೀರಿನಿಂದ ಉಪ್ಪಿಟ್ಟು, ಕಡಬು, ಕಲ್ತಪ್ಪ, ಹಲ್ವಾ, ಕೇಸರಿಬಾತ್ ಮಾಡಬಹುದು.
ಇನ್ನೊಂದು ವಿಶೇಷ ತಿಂಡಿ ಎಂದರೆ ಮರಕೆಸದಿಂದ ಮಾಡುವ ತಿಂಡಿ ಎಂದರೆ ಪತ್ರೊಡೆ.
ಮರಕೆಸ: ಮರಕೆಸದ ಮಹತ್ವ ಹೇಳಲು ನಾನು ಬರುತ್ತಿದ್ದೇನೆ.
ಮರಕೆಸವನ್ನು ಮಳೆಗಾಲದಲ್ಲಿ ಯಾಕೆ ಬಲು ಉಪಯೋಗಿಸುತ್ತಾರೆ ಎಂದರೆ ಒಂದು ತಿಂಗಳವರೆಗೆ ಮರಕೆಸದಲ್ಲಿರುವ ಭೂತ ಪಿಶಾಚಿಗಳು ಭೂಮಿಯಲ್ಲಿ ತೋಟ ಹಾಗೂ ನದಿ, ತೋಡುಗಳಲ್ಲಿ ಇರುವ ಕೆಸಗಳಲ್ಲಿ ಸೇರಿಕೊಳ್ಳುತ್ತವೆ.
ಮರಕೆಸದಲ್ಲಿ ಪತ್ರೊಡೆಯನ್ನು ಮಾಡುತ್ತಾರೆ. ನಮ್ಮ ಶರೀರದಲ್ಲಿನ ತಲೆಕೂದಲು ಹಾಗೂ ಬೇಡವಾದ ವಸ್ತುವನ್ನು ಕರಗಿಸುತ್ತದೆ.
- ಬೈಮನ ರಘು, ಚೇರಂಬಾಣೆ.
ಮೊ. ೯೪೪೮೭೦೦೯೭೦.