ನಮ್ಮ ಪುಟ್ಟ ಜಿಲ್ಲೆ ಕೊಡಗು. ಕೊಡಗು ಎಂದರೇನೇ ವಿಶೇಷ. ಆಚರಣೆಯಲ್ಲಾಗಲಿ, ಆಡುವ ಭಾಷೆಯಲ್ಲಾಗಲಿ, ತೊಡುವ ಉಡುಪಲ್ಲಾಗಲಿ, ಅತಿಥಿ ಸತ್ಕಾರದಲ್ಲಾಗಲಿ, ಸ್ನೇಹದಲ್ಲಾಗಲಿ ಶಾಂತಿ ಕಾಪಾಡುವದರಲ್ಲಾಗಲಿ, ಸೇವಿಸುವ ಆಹಾರದಲ್ಲಾಗಲಿ, ಪದ್ಧತಿಗಳಲ್ಲಿ ಎಲ್ಲದರಲ್ಲೂ ವಿಭಿನ್ನತೆ ಕಾಣುತ್ತೇವೆ. ಅದರಲ್ಲೊಂದು ಈ ಆಟಿ ಸಮಯ. ಪ್ರಕೃತಿ ಸಂಪದ್ಭರಿತ ಜಿಲ್ಲೆ. ಕಾಡು, ಕೃಷಿ, ಜಲಪಾತಗಳು ಇಲ್ಲಿಯ ಅಮೂಲ್ಯ ಸಂಪತ್ತು. ಕೃಷಿಯನ್ನು ಆಧರಿಸಿದ ಹಬ್ಬಗಳೇ ಇಲ್ಲಿ ಹೆಚ್ಚು. ಕೃಷಿಗೆ ಹೆಚ್ಚಾಗಿ ಇಲ್ಲಿನ ಪ್ರಾಮುಖ್ಯತೆ. ಪ್ರತಿ ಹಬ್ಬಗಳಲ್ಲೂ ಹಿಂದಿನಿAದಲೇ ಬಂದAತಹ ಕೃಷಿಯೊಂದಿಗಿನ ಭಾವನಾತ್ಮಕ ಸಂಬAಧ ಎದ್ದು ಕಾಣುತ್ತದೆ.
ಇಂದಿನ ಕಕ್ಕಡ ಮಾಸ ಎಂದರೆ ಆಡು ಭಾಷೆಯ ಆಟಿ ತಿಂಗಳು. ಈ ತಿಂಗಳಲ್ಲಿ ಕೊಡಗಿನೆಲ್ಲೆಡೆ ಬಿಡುವಿಲ್ಲದ ಮಳೆ, ಸದಾ ಕೊರೆವ ಚಳಿ ಇರುವುದರಿಂದ ಮಳೆಯಲ್ಲೇ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಳ್ಳುವ ಅಗತ್ಯತೆ ಇತ್ತು. ಆಗ ಬಂದಿದ್ದೇ ಆಟಿ ಆಚರಣೆ.
ಕೊಡಗಿನಲ್ಲಿ ಕಕ್ಕಡ ತಿಂಗಳು ಜುಲೈ ೧೭ ರಿಂದ ಆರಂಭವಾಗಿದ್ದು, ಅಗಸ್ಟ್ ೧೬ ರವರೆಗೆ ಇರಲಿದೆ. ಇದರ ನಡುವೆ ಆಟಿ ೧೮ನೇ ದಿನ(ಆಗಸ್ಟ್ ೩)ವನ್ನು ಆಟಿ ಹದಿನೆಂಟು ಎಂದು ಆಚರಿಸಲಾಗುತ್ತದೆ. ಆಟಿ ತಿಂಗಳ ೧೮ನೇ ದಿನಕ್ಕೆಲ್ಲ ಗದ್ದೆ ಕೆಲಸಗಳು (ಈಗ ಗದ್ದೆ ಕೆಲಸಗಳು ಕಡಿಮೆ) ಬಹುತೇಕ ಮುಗಿದಿರುತಿತ್ತು. ಈ ವೇಳೆಗೆ ದುಡಿದು ಸುಸ್ತಾದ ದೇಹಕ್ಕೆ ಚೈತನ್ಯ ತುಂಬಬೇಕಾಗಿತ್ತು. ದೇಹ ಶೀತಮಯವಾಗಿರುವ ಕಾರಣ ಉಷ್ಣಾಂಶ ಹೆಚ್ಚಿಸುವ ಅಗತ್ಯವಿತ್ತು. ಇದಕ್ಕಾಗಿ ಹಿರಿಯರು ಕೆಲವು ಗಿಡಮೂಲಿಕೆಗಳ ಉಪಯೋಗ ಅರಿತು ಅದನ್ನು ಸೇವಿಸುತ್ತಿದ್ದರು. ಅದುವೇ ಆಟಿ ಸೊಪ್ಪು.
ಕೊಡಗಿನ ಕಾಡುಗಳಲ್ಲಿ, ತೋಟಗಳಲ್ಲಿ ಪೊದೆಯಾಗಿ ಬೆಳೆಯುವ ಉದ್ದುದ್ದ ದಂಟಿನ ಮೂರ್ನಾಲ್ಕು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಸಸ್ಯ ಈ ಆಟಿ ಸೊಪ್ಪು. ಈ ಸೊಪ್ಪಿನಲ್ಲಿ ಆಟಿ ಆರಂಭವಾಗುತ್ತಿದ್ದAತೆ ಒಂದೊAದೇ ಔಷಧೀಯ ಗುಣ ಸೇರುತ್ತಾ ಹೋಗಿ ಆಟಿ ೧೮ ರಂದು ೧೮ ತರದ ಔಷಧಿಗಳು ಇದರಲ್ಲಿ ಅಡಕವಾಗುತ್ತದೆ. ಬಳಿಕ ಅದು ಕಡಿಮೆ ಆಗುತ್ತಾ ಹೋಗುತ್ತದೆ ಎಂಬುದು ನಂಬಿಕೆ. ಹೀಗಾಗಿ ಆಟಿ ಹದಿನೆಂಟರAದು ಈ ಸೊಪ್ಪಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕಾಡಿನಲ್ಲಿ ಸಿಗುವ ಈ ಸೊಪ್ಪನ್ನು ತಂದು ಶುಚಿಗೊಳಿಸಿ ತೊಳೆದು, ನೀರಿನಲ್ಲಿ ಬೇಯಿಸಿದಾಗ ಸುವಾಸನೆಯೊಂದಿಗೆ ಕಡು ನೀಲಿ ಬಣ್ಣದ ರಸ ಬಿಡುತ್ತದೆ. ಬಳಿಕ ಸೊಪ್ಪನ್ನು ಬೇರ್ಪಡಿಸಿ ರಸವನ್ನು ತೆಗೆದು ಆ ನೀರಿಗೆ ಅಕ್ಕಿ, ಬೆಲ್ಲ ಸೇರಿಸಿ ತುಪ್ಪ, ಗೋಡಂಬಿ, ತೆಂಗಿನಕಾಯಿ ಚೂರುಗಳನ್ನು ಹಾಕಿ ಪಾಯಸ ಮಾಡಲಾಗುತ್ತದೆ ಬರ್ಫಿ, ತಟ್ಟೆ ಇಡ್ಲಿ ಇನ್ನಿತರ ಖಾದ್ಯಗಳನ್ನು ಈ ನೀರಿನಿಂದ ಮಾಡಲಾಗುತ್ತದೆ. ಈ ಆಟಿ ಪಾಯಸವನ್ನು ಸೇವಿಸುವಾಗ ಜೇನು, ತುಪ್ಪ ಬೆರೆಸಿ ಸವಿದರೆ ತುಂಬಾ ರುಚಿಯಾಗಿರುತ್ತದೆ. ಆಟಿ ಹದಿನೆಂಟರAದು ಕೊಡಗಿನ ಎಲ್ಲಾ ಮನೆಗಳಲ್ಲೂ ಆಟಿ ಪಾಯಸದ ಘಮಲು ತುಂಬಿರುತ್ತದೆ. ಇತರರಿಗೆ ಈ ಪಾಯಸ ನೋಡಿದರೆ ಇದೇನು ನೇರಳೆ ಬಣ್ಣದಲ್ಲಿದೆ ಎಂದು ಅಚ್ಚರಿ ಆಗಬಹುದು. ಆದರೆ ಇದರ ರುಚಿ ನೋಡಿದವರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ವರ್ಷಕ್ಕೊಮ್ಮೆ ಮಾಡುವ ಪಾಯಸ ಇದು.
ಉಪಯೋಗ: ಈ ಸೊಪ್ಪಿನ ಪಾಯಸ ಕುಡಿದರೆ ಜ್ವರ, ಶೀತ ಕಡಿಮೆಯಾಗುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇನ್ನೂ ಈ ಆಟಿ ತಿಂಗಳನ್ನು ಹಬ್ಬವೆಂದೇ ಹೇಳಬಹುದು, ಏಕೆಂದರೆ ಹಲವರು ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಕಣಿಲೆ, ಮರ ಕೆಸದ ಪತ್ರೊಡೆ, ನಾಟಿ ಕೋಳಿ ಇತ್ಯಾದಿಗಳನ್ನು ಸೇವಿಸುತ್ತಾರೆ. ಇವುಗಳಲ್ಲಿಯೂ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿದೆ. ಇದು
ಕೊಡಗಿನ ಆಟಿ ತಿಂಗಳ ವೈಶಿಷ್ಟ್ಯ
- ಎಸ್.ಕೆ. ಅಶ್ವಿನಿ, ಮಡಿಕೇರಿ.