ವೀರಾಜಪೇಟೆ, ಆ. ೨: ವೀರಾಜಪೇಟೆ ಲಯನ್ಸ್ ಕ್ಲಬ್ ಮತ್ತು ವಿಮಾ ನಿಗಮ ಪಿಂಚಣಿದಾರರ ಸಂಘ ಕೊಡಗು ಘಟಕದ ಸಂಯುಕ್ತ ಆಶ್ರಯದಲ್ಲಿ ತಾ. ೫ ರಂದು ಸಾರ್ವಜನಿಕರಿಗೆ ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಉಚಿತ ಕಿವಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಅಮ್ಮಣಿಚಂಡ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಾಹ್ನ ೮.೩೦ ಗಂಟೆಯಿAದ ಅಪರಾಹ್ನ ೧ ಗಂಟೆಯವರೆಗೆ ನುರಿತ ತಜ್ಞ ವೈದ್ಯರಿಂದ ತಪಾಸಣಾ ಕಾರ್ಯ ನಡೆಯಲಿದೆ. ವೀರಾಜಪೇಟೆ ಲಯನ್ಸ್ ಕ್ಲಬ್ ೫೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಹೇಳಿದರು.
ವಿಮಾ ನಿಗಮ ಪಿಂಚಣಿದಾರರ ಸಂಘ ಕೊಡಗು ಘಟಕದ ಕಾರ್ಯದರ್ಶಿ ಎ.ಬಿ. ಪ್ರಸನ್ನ ಮಾತನಾಡಿ, ಲಯನ್ಸ್ ಸಂಸ್ಥೆಯು ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ಅವರೊಂದಿಗೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ದೃಷಿಯಿಂದ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಅಪರಾಹ್ನ ವಿಮಾ ನಿಗಮ ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ನ ಖಜಾಂಚಿ ಎ.ಪಿ. ಪ್ರಸನ್ನ, ವಿಮಾ ನಿಗಮ ಪಿಂಚಣಿದಾರರ ಸಂಘದ ಸಹ ಕಾರ್ಯದರ್ಶಿ ಶಶಿಕಿರಣ್, ಮಡಿಕೇರಿ ಲಯನ್ಸ್ ಸಂಸ್ಥೆöಯ ಸದಸ್ಯ ಚಾಮಾ ಉಪಸ್ಥಿತರಿದ್ದರು.