ಕುಶಾಲನಗರ, ಆ. ೨: ೧೮ನೇ ವರ್ಷದ ಇಶಾ ಗ್ರಾಮೋತ್ಸವ-೨೬ ರೂರಲ್ ಪ್ರೀಮಿಯರ್ ಲೀಗ್‌ನ ಮೊದಲ ಹಂತದ ಕ್ಲಸ್ಟರ್ ಪಂದ್ಯಾವಳಿಗಳಿಗೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.

ಪಟ್ಟಣದ ಪಿಎಂ ಶ್ರೀ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಹಾಗೂ ಗಣ್ಯರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ದಿನೇಶ್ ಕುಮಾರ್, ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಶಾ ಗ್ರಾಮೋತ್ಸವ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಇಶಾ ಗ್ರಾಮೋತ್ಸವದ ಮಾಧ್ಯಮ ಸ್ವಯಂಸೇವಕ ರವಿತೇಜ ಮಾತನಾಡಿ, ಇಶಾ ಗ್ರಾಮೋತ್ಸವವು ಗ್ರಾಮೀಣ ಸಮುದಾಯಗಳನ್ನು ಒಗ್ಗೂಡಿಸುವ, ಬೇರುಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಹಾಗೂ ಸಾಮಾಜಿಕ ರೂಪಾಂತರಕ್ಕೆ ಉತ್ತೇಜನ ನೀಡುವ ಕ್ರೀಡಾ ಉತ್ಸವವಾಗಿದೆ ಎಂದು ತಿಳಿಸಿದರು.

ದೇಶದಾದ್ಯಂತ ಗ್ರಾಮೀಣ ಪ್ರದೇಶಗಳ ೮೦ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆ ಅವಕಾಶ ಕಲ್ಪಿಸುತ್ತಿದೆ. ದೇಶದ ೧೦ ರಾಜ್ಯಗಳಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದು, ಸೆಪ್ಟೆಂಬರ್ ೬ರಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧ ಗ್ರಾಮಗಳಿಂದ ವಾಲಿಬಾಲ್ ವಿಭಾಗದಲ್ಲಿ ೧೫ ಪುರುಷರ ತಂಡಗಳು ಹಾಗೂ ಥ್ರೋಬಾಲ್ ವಿಭಾಗದಲ್ಲಿ ೧೧ ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ನಿವೃತ್ತ ಸುಬೇದಾರ್ ಎ.ಕೆ. ರಂಜಿತ್, ಚಲನಚಿತ್ರ ನಟಿಯರಾದ ತೇಜಸ್ವಿನಿ ಶರ್ಮ ಹಾಗೂ ಸಿಂಚನ ಪ್ರೀತಂ ಶೆಟ್ಟಿ, ಸಾಮಾಜಿಕ ಜಾಲತಾಣದ ಪ್ರಮುಖ ರಾಹಿಲ್, ಅಂತರರಾಷ್ಟಿçÃಯ ವಾಲಿಬಾಲ್ ಆಟಗಾರ ತರುಣ್ ಗೌಡ, ರಾಷ್ಟಿçÃಯ ಥ್ರೋಬಾಲ್ ಆಟಗಾರ್ತಿಯರಾದ ನಮೃತ ಮತ್ತು ಅರ್ಪಿತ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ಇಶಾ ಗ್ರಾಮೋತ್ಸವದ ಕುಶಾಲನಗರ ಕ್ರೀಡಾ ಸಂಯೋಜಕ ಅಖಿಲ್, ಸ್ವಯಂಸೇವಕರಾದ ಚಿತ್ತರಂಜನ್, ಅಕ್ಷಯ್, ನಿರಂಜನ್, ಶ್ರೀಧರ್, ಅಮಿತ್, ಅಗಸ್ತ್ಯ, ವಿವಿಧ ಸಂಘ-ಸAಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.