ಮಡಿಕೇರಿ, ಆ. ೨: ಕಣ್ಣೂರು ಜಿಲ್ಲೆಯ ಚಾಲೋಡ್‌ನ ಮಟ್ಟನೂರು ನಗರ ಸಹಕಾರಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ, ನಾಪೋಕ್ಲು ಮೂಲದ ಮೊಹಮ್ಮದ್ ರಿಜ್ವಾನ್ (೩೭) ಎಂಬಾತನನ್ನು ಮಟ್ಟನೂರು ಪೊಲೀಸರು ಬಂಧಿಸಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಣ್ಣೂರು ನಗರ ಪೊಲೀಸ್ ಆಯುಕ್ತ ಬಿ.ವಿ. ವಿಜಯ್ ಭರತ್ ರೆಡ್ಡಿ (ಐಪಿಎಸ್), ಕೂತುಪರಂಬ ಎಎಸ್‌ಪಿ ಸಿ.ಬಿ. ಟಾಮ್ ಹಾಗೂ ಇನ್‌ಸ್ಪೆಕ್ಟರ್ ಕೆ.ಆರ್. ಬಿಜು ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಫೈರೂಜ್ ಮೊಹಮ್ಮದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.

ಚಾಲೋಡ್‌ನ ಮಟ್ಟನೂರು ನಗರ ಸಹಕಾರಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನದ ಆಭರಣಗಳನ್ನು ಅಡವಿಡಲು ಯತ್ನಿಸಿದ ವೇಳೆ ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನಿತಿನ್ ಮತ್ತು ವಿಷ್ಣು ಅವರನ್ನು ಬಂಧಿಸಲಾಗಿದ್ದು, ಬಳಿಕ ಪ್ರಮುಖ ಸಂಚುಕೋರ ಪೆರುವಲತ್ತುಪರಂಬದ ಕೆ.ಪಿ. ನವಾಸ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿಗಳ ಬ್ಯಾಂಕ್ ವ್ಯವಹಾರ ಹಾಗೂ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಮೊಹಮ್ಮದ್ ರಿಜ್ವಾನ್‌ನ ಪಾತ್ರ ಬೆಳಕಿಗೆ ಬಂದಿದೆ. ತನಿಖೆಯ ಪ್ರಕಾರ ರಿಜ್ವಾನ್ ಎಂಟು ಚಿನ್ನದ ಬಳೆಗಳನ್ನು ಹಾಗೂ ನವಾಸ್ ಹತ್ತು ಬಳೆಗಳನ್ನು ನಿತಿನ್‌ಗೆ ನೀಡಿದ್ದರೆಂದು ತಿಳಿದುಬಂದಿದೆ. ಈ ಹಿಂದೆ ಪೊಲೀಸರು ಮೂರು ಬಳೆಗಳನ್ನು ವಶಪಡಿಸಿಕೊಂಡಿದ್ದು, ಉಳಿದ ಬಳೆಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ನಕಲಿ ಆಭರಣಗಳನ್ನು ಚಿನ್ನದೊಂದಿಗೆ ಬೆರೆಸಿ ತಯಾರಿಸಿದ್ದರಿಂದ ಸಾಮಾನ್ಯ ತಪಾಸಣೆಯಲ್ಲಿ ಅವುಗಳನ್ನು ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪತ್ತೆಹಚ್ಚುವುದು ಕಷ್ಟವಾಗುತ್ತಿತ್ತು. ಸುಮಾರು ೩೦ ಸಾವಿರ ಮೌಲ್ಯದ ನಕಲಿ ಬಳೆಗಳನ್ನು ಅಡವಿಟ್ಟು ತಲಾ ರೂ. ೧ ಲಕ್ಷದವರೆಗೆ ಸಾಲ ಪಡೆಯಲಾಗಿದ್ದು, ಈ ಮೂಲಕ ಒಟ್ಟು ಸುಮಾರು ೧೧ ಲಕ್ಷದ ಆರ್ಥಿಕ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಡಗಿನಲ್ಲಿ ವ್ಯವಹಾರ ನಡೆಸುತ್ತಿರುವ ರಿಜ್ವಾನ್ ವಿರುದ್ಧ ಮಡಿಕೇರಿ ಹಾಗೂ ವೀರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಇದೇ ಮಾದರಿಯ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಪ್ರಕರಣದ ಕುರಿತು ಮಟ್ಟನೂರು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.