ಮಡಿಕೇರಿ, ಆ. ೨: ಮಡಿಕೇರಿ ನಗರಕ್ಕೆ ಕೂಟುಹೊಳೆ ಮತ್ತು ಕುಂಡಾಮೇಸ್ತಿç ನದಿಯಿಂದ ಅಮೃತ್-೨.೦ ಯೋಜನೆಯಡಿ ನಡೆಯುತ್ತಿರುವ ನೀರು ಸರಬರಾಜು ಸುಧಾರಣಾ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಮತ್ತು ವಿಳಂಬದ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ಮಡಿಕೇರಿ ದೇಚೂರುವಿನ ಎಂ. ಧನಂಜಯ ಅವರು ಈ ಬಗ್ಗೆ ಲೋಕಾಯುಕ್ತರಿಗೆ ಲಿಖಿತ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಸಾರಾಂಶ ಇಂತಿದೆ

ಅಮೃತ್-೨.೦ ಯೋಜನೆಯ(ಟ್ರಾಂಚ್ ೧&೨)ಅಡಿಯಲ್ಲಿ ಮಡಿಕೇರಿ ನಗರದ ಅಸ್ತಿತ್ವದಲ್ಲಿರುವ ನೀರು ಸರಬರಾಜು ವ್ಯವಸ್ಥೆ ಸುಧಾರಣಾ ಕಾಮಗಾರಿಯನ್ನು ಶ್ರೀ ವೆಂಕಟರಮಣಿ ರೆಡ್ಡಿ ಕನಾಲ, ಒ/S ಏಗಿಖ ಅoಟಿsಣಡಿuಛಿಣioಟಿ ಊeighಣs Pಡಿivಚಿಣe ಐimiಣeಜ, ಶ್ರೀರಾಂಪುರ, ಬೆಂಗಳೂರು-೫೬೦೦೨೧ ಇವರು ಗುತ್ತಿಗೆ ಪಡೆದಿರುತ್ತಾರೆ.

ದಿನಾಂಕ ೨೫.೧೦.೨೦೨೪ ರಂದು ಕಾರ್ಯಾದೇಶ ನೀಡಲಾಗಿದ್ದು, ಮಾನ್ಸೂನ್ ಸೇರಿದಂತೆ ೧೮ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಷರತ್ತಿತ್ತು. ಒಟ್ಟು ಗುತ್ತಿಗೆ ಮೊತ್ತ ರೂ. ೪೭,೬೬,೨೪,೬೫೫ ಆಗಿರುತ್ತದೆ. ಈಗಾಗಲೇ ೪೦ ಕೋಟಿ ಹಣ ಸಂದಾಯ ಆಗಿರುತ್ತದೆ.

ಆದರೆ ಟೆಂಡರ್ ಆದ ದಿನದಿಂದ ೨೦ ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಪೇವ್‌ಮೆಂಟ್ ಮಿಲ್ಲಿಂಗ್ ಮತ್ತು ಟ್ರೆಂಚ್ ಮರುಸ್ಥಾಪನೆಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ.

ಈ ಯೋಜನೆಗೆ ದೊಡ್ಡ ಮೊತ್ತದ ಹಣ ವಿನಿಯೋಗಿಸಲಾಗಿದ್ದು, ಯೋಜನೆಯ ವಿಶೇಷಣಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗಬೇಕು, ಉತ್ತಮ ಗುಣಮಟ್ಟದ ಸಾಮಗ್ರಿ ಮತ್ತು ನುರಿತ ಕಾರ್ಮಿಕರನ್ನು ಬಳಸಿ ಕೆಲಸ ನಿರ್ವಹಿಸಿಲ್ಲ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಪೈಪ್ ಅಳವಡಿಸಲು ರಸ್ತೆಬದಿ, ಮಧ್ಯಭಾಗಗಳಲ್ಲೂ ಕೊರೆದುಹಾಕಿ ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ. ಕೆಲವು ಕಡೆ ಬೃಹತ್ ಗಾತ್ರದ ಪೈಪುಗಳನ್ನು ಸರಿಯಾಗಿ ಮುಚ್ಚದೆ ರಸ್ತೆ ಬದಿ ಬಾಯ್ದೆರೆದು ನಿಂತಿವೆ.

ಅದರ ತುದಿಭಾಗವನ್ನು ಮುಚ್ಚದೆ ಮಣ್ಣು ಸೇರಿಕೊಂಡಿದೆ. ಪೈಪ್ ಅಳವಡಿಸಲು ರಸ್ತೆಬದಿಯ ಇಂಟರ್ ಲಾಕ್‌ಗಳನ್ನು ತೆಗೆದು ಸರಿಯಾಗಿ ಮರುಜೋಡಣೆ ಮಾಡದೆ ಎಲ್ಲವೂ ಕಿತ್ತು ಹೋಗಿದೆ. ಇದರಿಂದ ಪಾದಚಾರಿಗಳು ಓಡಾಡಲು ಆಗುತ್ತಿಲ್ಲ, ರಸ್ತೆ ಕೂಡ ಕಿಷ್ಕಿಂದೆಯಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಕಾಮಗಾರಿಯನ್ನು ಕಾಲಮಿತಿಯೊಂದಿಗೆ ಮುಗಿಸದೆ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ವಿಳಂಬದಿAದ ಸಾರ್ವಜನಿಕರಿಗೆ ಸಮಸ್ಯೆಗಳು ಉಂಟಾಗಿದ್ದು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಧನಂಜಯ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.