ಮಡಿಕೇರಿ, ಆ. ೨: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೬ನೇ ಸಾಲಿನ ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.
ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಕಣಜಾಲು ಪೂವಯ್ಯ ಅವರ “ಕಾರ್ತಿಂಗಲಿ ದೆವ್ವಕ್ಕೆ ಕೊಡ್ದು” (ಪ್ರಥಮ), ವಿಶ್ವನಾಥ ಎಡಿಕೇರಿ ಅವರ “ಪೊನ್ನಪ್ಪ ಮತ್ತೆ ಸೋಂಪ” (ದ್ವಿತೀಯ) ಹಾಗೂ ರೇಣುಕಾ ಮುಕ್ಕಾಟಿ ಅವರ “ಯುದ್ಧ ಸುರಾತ್ ನೇ ಗ್ಯಾಸ್ ಉಸಾರ್ “(ತೃತೀಯ) ಇವರು ಬಹುಮಾನ ಪಡೆದುಕೊಂಡಿರುತ್ತಾರೆ ಎಂದು ರಿಜಿಸ್ಟಾçರ್ ತಿಳಿಸಿದ್ದಾರೆ.