ಮಡಿಕೇರಿ,ಜು.೩: ಕಳೆದ ನಾಲ್ಕೆöÊದು ದಿನಗಳಿಂದ ರಭಸದಿಂದ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಇಳಿಮುಖವಾಗಿದೆ. ತನ್ನ ಕೊನೆಯ ಪಾದದಲ್ಲಿ ಆರ್ಭಟಿಸಿದ್ದ ಪುಷ್ಯ ಮಳೆಯ ರಭಸ ಅಂತ್ಯಗೊAಡಿದ್ದು, ಇಂದಿನಿAದ ಆಶ್ಲೇಷ ಮಳೆ ಆರಂಭವಾಗಿದೆಯಾದರೂ ನಿಧಾನಗತಿಯಲ್ಲಿ ಅಡಿಯಿಟ್ಟಿದೆ. ಕಳೆದ ಎರಡು ದಿನಗಳಿಂದ ತಲೆದೋರಿದ್ದ ಪ್ರವಾಹ ಪರಿಸ್ಥಿತಿ ಇಳಿಮುಖವಾಗುತ್ತಿರುವದು ಕಂಡು ಬರುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ರಭಸದಿಂದ ಮಳೆಯಾಗಿದ್ದು, ನದಿ-ತೊರೆಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಅಲ್ಲಲ್ಲಿ ಭೂಕುಸಿತದೊಂದಿಗೆ ಹಾನಿ ಸಂಭವಿಸಿತ್ತು. ಇದೀಗ ಇಂದು ಬೆಳಿಗ್ಗೆಯಿಂದಲೇ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಅತಿ ಹೆಚ್ಚು ಮಳೆ ಸುರಿದ ಭಾಗಮಂಡಲ, ತಲಕಾವೇರಿ, ದಕ್ಷಿಣ ಕೊಡಗಿನ ಭಾಗಗಳಲ್ಲೂ ಮಳೆ ಕಡಿಮೆಯಾಗಿದೆ. ಕಳೆದ ೨೪ ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೦.೭೬ ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೫೭ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆÀ ೪೨.೩೨ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೮೫.೧೫ ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೦.೨೨ ಇಂಚು, ಕಳೆದ ವರ್ಷ ಇದೇ ದಿನ ೦.೫೫ ಇಂಚು, ಜನವರಿಯಿಂದ ಇಲ್ಲಿಯವರೆಗೆ ೬೫.೫೬ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೧೨೮.೧೫ ಇಂಚು ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೦.೨೭ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧.೦೯ ಇಂಚು, ಜನವರಿಯಿಂದ ಇಲ್ಲಿಯವರೆಗೆ ೩೯.೯೯ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೭೭.೬೫ ಇಂಚು ಮಳೆಯಾಗಿತ್ತು.
ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೦.೧೧ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೨೯, ಜನವರಿಯಿಂದ ಇಲ್ಲಿಯವರೆಗೆ ೪೦.೭೪ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೮೦.೦೯ ಇಂಚು ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೦.೮೨ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೭೮ ಇಂಚು, ಜನವರಿಯಿಂದ ಇಲ್ಲಿಯವರೆಗೆ ೪೬.೮೧ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೯೬.೬೯ ಇಂಚು ಮಳೆಯಾಗಿತ್ತು.
ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೦.೫೯ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೧೨ ಇಂಚು, ಜನವರಿಯಿಂದ ಇಲ್ಲಿಯವರೆಗೆ ೧೮.೪೮ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೪೩.೧೫ ಇಂಚು ಮಳೆಯಾಗಿತ್ತು.
ಮಡಿಕೇರಿ ಹೋಬಳಿಗೆ ೨.೧೪ ಇಂಚು, ೧.೦೨, ನಾಪೋಕ್ಲು ೧.೦೨, ಸಂಪಾಜೆ ೨.೬೬, ಭಾಗಮಂಡಲ ೨.೩೯, ವಿರಾಜಪೇಟೆ ೦.೨೯, ಅಮ್ಮತ್ತಿ ೦.೨೬, ಹುದಿಕೇರಿ ೦.೪೦, ಶ್ರೀಮಂಗಲ ೦.೦೪, ಪೊನ್ನಂಪೇಟೆ ೦.೦೫, ಬಾಳೆಲೆ ೦.೦೩, ಸೋಮವಾರಪೇಟೆ ೦.೪೪, ಶನಿವಾರಸಂತೆ ೦.೦೧, ಶಾಂತಳ್ಳಿ ೧.೩೧, ಕೊಡ್ಲಿಪೇಟೆ ೦.೧೬, ಕುಶಾಲನಗರ ೦.೫೮, ಸುಂಟಿಕೊಪ್ಪ ೧.೬೭ ಇಂಚು ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೫೭.೦೧ ಅಡಿಗಳು. ಕಳೆದ ವರ್ಷ ಇದೇ ದಿನ ೨೮೫೫.೬೧ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೦.೫೫ ಇಂಚು, ಕಳೆದ ವರ್ಷ ಇದೇ ದಿನ ೦.೧೪ ಇಂಚು. ಇಂದಿನ ನೀರಿನ ಒಳಹರಿವು ೧೧೬೪೫ ಕ್ಯೂಸೆಕ್, ಕಳೆದ ವರ್ಷ ಇದೇ ದಿನ ೩೯೯೪ ಕ್ಯೂಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ ೧೦೭೫೦ ಕ್ಯೂಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ ೩೦೦೦ ಕ್ಯೂಸೆಕ್. ನಾಲೆಗೆ ೫೦೦ ಕ್ಯೂಸೆಕ್.