ಕೂಡಿಗೆ, ಅ. ೩: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರ್, ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ದೊಡ್ಡಅಳುವಾರ ಇವರ ವತಿಯಿಂದ ವಿಷಪೂರಿತ ಹಾವುಗಳು ಗುರುತಿಸುವಿಕೆ, ಮುನ್ನೆಚ್ಚರಿಕೆ ಕ್ರಮಗಳು ಎಂಬ ವಿಷಯದ ಬಗ್ಗೆ ಉಚಿತವಾಗಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಖ್ಯಾತ ಉರಗ ತಜ್ಞ ಹಾಗೂ ಕೂರ್ಗ್ ವೈಡ್ಸ್ ಲೈಫ್ ಸೊಸೈಟಿಯ ಬೋಸ್ ಮಾದಪ್ಪ ವಿಷಪೂರಿತ ಹಾವುಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ತಿಳಿಸಿದರು. ಹಾವುಗಳು ಎಂದಾಕ್ಷಣ ಆತಂಕ ಭಯಪಡಬಾರದು. ಇದೊಂದು ಗೊತ್ತಾಗದ ಹಾಗೆ ನೈಸರ್ಗಿಕವಾಗಿ ನಿಸರ್ಗವನ್ನು ಪೋಷಣೆ ಮಾಡುತ್ತದೆ. ದೇಶದಲ್ಲಿ ಆಹಾರ ಧಾನ್ಯಗಳನ್ನು ಹಾಳು ಮಾಡುವ ಇಲಿ, ಹೆಗ್ಗಣಗಳ ಪರಮವೈರಿ. ಹಾವು ರೈತ ಸ್ನೇಹಿ, ಆಹಾರ ಸಂರಕ್ಷಣೆಯಲ್ಲಿ ಇದರ ಪಾತ್ರ ಬಹು ಮುಖ್ಯ ಎಂದು ಹಾವುಗಳಿಗೆ ಸಂಬAಧಿಸಿದAತೆ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ ಒದಗಿಸಿದರು.
ಈ ಸಂದರ್ಭ ಕೂಡಿಗೆ ಜಾನುವಾರು ಸಂರ್ವಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕಿ ಡಾ. ಎಂ.ಸಿ. ಲತಾ, ದೊಡ್ಡಅಳುವಾರ ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಹಾಜರಿದ್ದು ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.