ಶನಿವಾರಸಂತೆ, ಆ. ೯: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಕೆರೆ ಗ್ರಾಮದಿಂದ ಮಾದೇಗೋಡು ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ಸುರಿಯುತ್ತಿರುವ ಮಳೆಗೆ ಆಳವಾದ ಗುಂಡಿ ಬಿದ್ದು ನೀರು ತುಂಬಿ ವಾಹನ ಸಂಚಾರವಿರಲಿ ಪಾದಚಾರಿಗಳಿಗೆ ತಿರುಗಾಡಲು ತುಂಬಾ ತ್ರಾಸದಾಯಕವಾಗಿದೆ ಎಂದು ಕೆಂಕೆರೆ - ಮಾದೇಗೋಡು ಗ್ರಾಮದ ಯುವಕರಾದ ಕಿರಣ್, ಅರುಣ್ ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು; ತಾವೇ ಸ್ವಂತ ಖರ್ಚಿನಲ್ಲಿ ಸ್ವತಃ ರಸ್ತೆಯ ಗುಂಡಿ ಮುಚ್ಚುವ ಕಾಯಕದಲ್ಲಿ ತೊಡಿಸಿಕೊಂಡಿದ್ದಾರೆ.
ಕೆAಕೆರೆಯಿAದ ಮಾದೇಗೋಡು ಗ್ರಾಮಕ್ಕೆ ತೆರಳುವ ಲೋಕೋಪಯೋಗಿ ಇಲಾಖೆಗೆ ಸೇರಿದ ೨.೨ ಕಿ.ಮೀ. ಮುಖ್ಯರಸ್ತೆ ೨೦ ವರ್ಷಗಳಿಂದ ಡಾಂಬರೀಕರಣ ಮಾಡದೇ ದುರಸ್ತಿ ಕಾಣದೇ ಯಥಾ ಸ್ಥಿತಿಯಲ್ಲಿದೆ. ಪ್ರತಿ ಮಳೆಗಾಲ ಬಂತೆAದರೆ ಗ್ರಾಮಸ್ಥರಿಗೆ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟ.ರಸ್ತೆ ತುಂಬಾ ಒಂದು ಅಡಿಗೂ ಹೆಚ್ಚು ಆಳದ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಬಿದ್ದೆದ್ದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯವೂ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗ್ರಾಮಸ್ಥರು ಹಾಗೂ ಮಾರಿಯಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಇದೇ ರಸ್ತೆಯನ್ನೇ ಅವಲಂಭಿಸಿದ್ದಾರೆ.
ಕೆAಕೆರೆ-ಮಾದೇಗೋಡು ಮುಖ್ಯರಸ್ತೆಯನ್ನು ದುರಸ್ತಿಪಡಿಸುವಂತೆ ಅಥವಾ ಹೊಸ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ಮಾಡಿದ್ದು; ಶಾಸಕರು ನೀಡಿದ ಭರವಸೆ ಈಡೇರಿಕೆ ಕೂಡಿ ಬಂದಿಲ್ಲ. ಸಂಬAಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹಾಗಾಗಿ, ನಾವೇ ಗ್ರಾಮಸ್ಥರು ಸೇರಿಕೊಂಡು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದರೂ ಶೀಘ್ರ ಸ್ಪಂದಿಸಲಿ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.