*ಗೋಣಿಕೊಪ್ಪ, ಆ. ೯: ಕಳತ್ಮಾಡುವಿನ ಲಯನ್ಸ್ ಕ್ಯಾಂಪಸ್ನಲ್ಲಿ ಲಿಯೋ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೂರ್ವ ಲಯನ್ಸ್ ಸಂಪುಟ ಕಾರ್ಯದರ್ಶಿ ಪಿ.ವಿ. ಅನಿಲ್ ಕುಮಾರ್ ಅವರು, ಲಿಯೋ ಕ್ಲಬ್ನ ಉದ್ದೇಶ, ದೃಷ್ಟಿಕೋನ ಹಾಗೂ ಸೇವಾ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಮಾಜ ಸೇವೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಲಿಯೋ ಕ್ಲಬ್ ಉತ್ತಮ ನಾಯಕತ್ವ ಬೆಳೆಸುವ ವೇದಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭ ನೂತನ ಅಧ್ಯಕ್ಷೆಯಾಗಿ ಭುವನ, ಕಾರ್ಯದರ್ಶಿಯಾಗಿ ಖುಷಿ ಪಿ.ಜಿ. ಹಾಗೂ ಖಜಾಂಚಿಯಾಗಿ ಹಿತಾಶ್ರೀ ಎಂ.ಎಸ್. ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಲಯನ್ಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಧನು ಉತ್ತಯ್ಯ ಮಾತನಾಡಿ, ಲಯನ್ಸ್ ಕ್ಲಬ್ನ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಅಂತರರಾಷ್ಟಿçÃಯ ಲಯನ್ಸ್ ಕ್ಲಬ್ ಸಹಾಯ ನಿಧಿಯಿಂದ ನಿರ್ಮಾಣವಾಗುತ್ತಿರುವ ಆಧುನಿಕ ಆಟದ ಮೈದಾನ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಎ. ಕರುಂಬಯ್ಯ, ಖಜಾಂಚಿ ಎ.ಬಿ. ಮಾದಪ್ಪ, ಸ್ಮಿತಾ ಅನಿಲ್, ಲಯನ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ ಸಿ.ಬಿ., ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾನ ಸಿ.ಎಸ್., ಕಾಲೇಜಿನ ಶಿಕ್ಷಕರು, ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಖುಷಿ ಪಿ.ಜಿ. ವಂದಿಸಿದರು.