ಕೂಡಿಗೆ, ಆ. ೯: ಜಿಲ್ಲೆಯಲ್ಲಿ ಹಲವು ರೈತರು ಈ ಸಾಲಿನಲ್ಲಿ ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಈ ಬಾರಿ ಶುಂಠಿ ಬೇಸಾಯ ಮಾಡಿದ್ದಾರೆ. ಆದರೆ ಈಗಾಗಲೇ ಶುಂಠಿ ಬೆಳೆಗೆ ಪೈರಿಕ್ಯುಲರಿಯ ಹಾಗೂ ಎಲೆಚುಕ್ಕೆ ರೋಗಗಳು ಕಂಡುಬರುತ್ತಿವೆ. ಬೆಳೆಯು ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿದ್ದು ವ್ಯಾಪ್ತಿಯ ರೈತರು ಆತಂಕದಲ್ಲಿದ್ದಾರೆ.

ಶುAಠಿ ಬೆಳೆಗೆ ಕಳೆದ ಸಾಲಿನಲ್ಲಿ ಸಾಧಾರಣ ಬೆಲೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ಬೆಳೆಗೆ ಉತ್ತಮ ಬೆಲೆಯು ದೊರೆಯುವುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಶುಂಠಿ ಬೆಳೆದಿದ್ದರು. ಅದಕ್ಕೆ ತಕ್ಕಂತೆ ಶುಂಠಿಗೆ ಉತ್ತಮವಾದ ಬೆಲೆಯು ಈ ಸಾಲಿನಲ್ಲಿ ರೈತರಿಗೆ ದೊರಕುತ್ತಿದೆ.

ಅನೇಕ ಬಗೆಯ ರಾಸಾಯನಿಕ ಔಷಧಗಳನ್ನು ಸಿಂಪಡಣೆ ಮಾಡಿದರೂ ಹತೋಟಿಗೆ ಬಾರದ ಚುಕ್ಕಿ ರೋಗದಿಂದಾಗಿ ರೈತರು ಈ ಬಾರಿ ಬೆಲೆ ಏರಿಕೆ ಇದ್ದರೂ ಸಹ ರೋಗದ ಆತಂಕದಲ್ಲಿದ್ದಾರೆ.