ವೀರಾಜಪೇಟೆ, ಆ. ೯: ಸಂಸ್ಥೆಯಿAದ ಸಾಲ ಪಡೆದುಕೊಂಡು ಸಕಾಲದಲ್ಲಿ ಮರು ಪಾವತಿ ಮಾಡದೆ ಸಂಸ್ಥೆಗೆ ಸತಾಯಿಸುತ್ತಿರುವವರ ವಿರುದ್ದ ಸರ್ಫೇಸಿ ಕಾಯ್ದೆ ಜಾರಿಗೊಳಿಸಿ ಸುಸ್ತಿ ಸಾಲದ ಮೊತ್ತವನ್ನು ಭರಿಸುವಂತೆ ಸರ್ವಾನುಮತದ ನಿರ್ಣಯ ಕೈಗೊಂಡು ಅಂಗೀಕರಿಸಲಾಯಿತು.
ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ಕಟ್ಟಡದಲ್ಲಿ ಕೊಡವ ಸೌಹಾರ್ದ ಸಹಕಾರಿಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಹಾಸಭೆಯಲ್ಲಿ ಸರ್ಫೇಸಿ ಕಾಯ್ದೆ ಬಳಸುವುದರ ಬಗ್ಗೆ, ಹಾಗು ಸಂಸ್ಥೆಯ ಅಳಿವು-ಉಳಿವಿನ ಬಗ್ಗೆ ವಿಸ್ತೃತ ಚರ್ಚೆ ನಡೆದು ಕ್ರಮ ಕೈಗೊಳ್ಳುವಂತೆ ಮಹಾಸಭೆ ಒಪ್ಪಿಗೆ ಸೂಚಿಸಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಸಹಕಾರಿಯು ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆ ಮೂರು ತಾಲೂಕುಗಳ ಕಾರ್ಯವ್ಯಾಪಿ ಹೊಂದಿದೆ. ೨೦೨೫-೨೬ನೇ ಸಾಲಿನ ೩೧-೦೩-೨೦೨೬ ಕ್ಕೆ ಲೆಕ್ಕಪರಿಶೋಧನಾ ವರದಿಯಂತೆ ಎ+ ಪಡೆದುಕೊಂಡಿದೆ. ಸಹಕಾರಿಯ ಒಟ್ಟು ಸದಸ್ಯ ಸಂಖ್ಯೆ - ೧೪೦೦ ಹಾಗೂ ಪಾಲು ಬಂಡವಾಳ ಮೊತ್ತ ರೂ ೧.೧೦ ಕೋಟಿ, ಒಟ್ಟು ಠೇವಣಾತಿ ರೂ ೯ಕೋಟಿ೨೪ ಲಕ್ಷಗಳಾಗಿದೆ. ವಿತರಿಸಿರುವ ವಿವಿಧ ಬಗೆಯ ಒಟ್ಟು ಸಾಲ ರೂ. ೭.೭೦ ಕೋಟಿ ಆಗಿರುತ್ತದೆ. ಹಲವು ಗ್ರಾಹಕರು ಸಾಲವನ್ನು ಸಹ ಹೊಂದಿಕೊAಡಿರುತ್ತಾರೆ, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿರುತ್ತಾರೆ. ೩೧.೦೩.೨೦೨೬ರ ಅವಧಿಗೆ ಶೇ. ೯೭ರಷ್ಟು ಸಾಲಗಳು ವಸೂಲಾಗಿರುತ್ತದೆ. ಇತರೆ ಬ್ಯಾಂಕಿನಲ್ಲಿ ೩.೨೦ ಕೋಟಿ ಹೂಡಿಕೆ ಮಾಡಲಾಗಿದ್ದು ೨೦೨೫-೨೬ನೇ ಸಾಲಿನಲ್ಲಿ ೨೭.೪೯ ಲಕ್ಷ ಲಾಭ ಗಳಿಸಿರುತ್ತದೆ.
೨೦೨೫-೨೬ ಸಾಲಿನ ಲಾಭಾಂಶದಲ್ಲಿ ಸದಸ್ಯರುಗಳಿಗೆ ಶೇ ೧೦ರಷ್ಟು ಡಿವಿಡೆಂಟ್ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಅಮ್ಮತ್ತಿಯಲ್ಲಿನ ಶಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಗತಿಯತ್ತ ಸಾಗುತ್ತಿದೆ. ಸಹಕಾರಿ ಸಂಪೂರ್ಣ ಗಣಕೀಕರಣಗೊಂಡಿದ್ದು ಗ್ರಾಹಕರ ಅನೂಕೂಲಕ್ಕಾಗಿ ಸೇಫ್ ಡೆಪಾಸಿಟ್ ಲಾಕರ್ ಹಾಗು ಇ-ಸ್ಟಾಂಪಿAಗ್ ಸೌಲಭ್ಯ, ಕ್ಯಾಶ್‌ಲೆಸ್ ಸೇವೆಗಳಾದ ನೆಫ್ಟ್, ಆರ್.ಟಿ.ಜಿ.ಎಸ್, ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ ಭಾರತೀಯ ರಕ್ಷಣಾ ಪಡೆಯಲ್ಲಿ ಹಗಲು, ರಾತ್ರಿ ಎನ್ನದೆ ದೇಶದ ರಕ್ಷಣೆಗಾಗಿ ತೊಡಗಿ ಕಾರ್ಯನಿರ್ವಹಿಸಿದ ನಿವೃತ್ತ ಯೋಧರು ಹಾಗೂ ಹಾಲಿ ಯೋಧರುಗಳಿಗೆ ಸೌಲಭ್ಯ ಕಲ್ಪಿಸಿದಂತೆ ವಿಧವೆಯರಿಗು ಕೂಡ ವಿಶೇಷ ಸೌಲಭ್ಯವನ್ನು ವಿಸ್ತರಿಸುವಂತೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಮಹಾಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.
ಮಹಾಸಭೆಯಲ್ಲಿ ಸಂಸ್ಥೆಗೆ ಸ್ವಂತ ಕಟ್ಟಡ, ಸದಸ್ಯರುಗಳಿಗೆ ಡಿವಿಡೆಂಟ್ ವಿತರಣೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ನಡೆದ ಚರ್ಚೆಯಲ್ಲಿ ಮಾದಂಡ ಪೂವಯ್ಯ, ಚಂಬAಡ ಕಾಳಯ್ಯ, ಬೊಳಕಾರಂಡ ವಿಠಲ್, ಬಾಚಿರ ಜಗದೀಶ್, ಸೋಮೇಯಂಡ ಬೋಸ್ ಬೆಳ್ಯಪ್ಪ, ಕುಲ್ಲಚಂಡ ಪೂಣಚ್ಚ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಬಿದ್ದಪ್ಪ ಮತ್ತಿತರರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗು ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಸದಸ್ಯರುಗಳ ಮಕ್ಕಳು ಹಾಗು ಹೆಚ್ಚು ಪಿಗ್ಮಿ ಸಂಗ್ರಹ ಮಾಡಿದವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ಕಾಂಡAಡ ಚರ್ಮಣ, ಐನಂಡ ಗಣಪತಿ, ಕೇಳಪಂಡ ವಿಶ್ವನಾಥ್, ಚೇಂದ್ರಿಮಾಡ ನಂಜಪ್ಪ, ವಾಟೇರಿರ ಪೂವಯ್ಯ, ಕೊಂಗAಡ ನಾಣಯ್ಯ, ನೆಲ್ಲಚಂಡ ಭೀಮಯ್ಯ, ಕಾಳೇಂಗಡ ತಿಮ್ಮಯ್ಯ, ಮೇಕೆರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯಾ, ಕಾರ್ಯನಿರ್ವಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು.