ಮಡಿಕೇರಿ, ಆ. ೯: ಮಹಾರಾಷ್ಟçದ ಪುಣೆಯಲ್ಲಿ ತಾ. ೧೨ ರಿಂದ ೨೩ ರವರೆಗೆ ೧೬ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ರಾಷ್ಟಿçÃಯ ಹಾಕಿ ಚಾಂಪಿಯನ್‌ಶಿಪ್-೨೦೨೬ ನಡೆಯಲಿದೆ. ಇದರಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಕೊಡಗು ಜಿಲ್ಲೆಯ ಒಂಬತ್ತು ಪ್ರತಿಭಾವಂತ ಆಟಗಾರ್ತಿಯರು ಸ್ಥಾನ ಪಡೆದುಕೊಂಡಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಆಲ್ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದುಕೊಂಡಿದ್ದ ಕೊಡಗಿನ ಆಟಗಾರ್ತಿಯರು ಇದೀಗ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ.

ದಿಶಾ ನಿಡ್ಯಮಲೆ, ಚೆಪ್ಪುಡಿರ ಮನೀಷಾ ಪೊನ್ನಮ್ಮ, ಚಂದನ ತಡಿಯಪ್ಪನ, ಅಚ್ಚಪಂಡ ಪÀರ್ಲಿನ್ ಪೊನ್ನಮ್ಮ, ಮೋನಿಕಾ ನಾಣಯ್ಯ, ಪ್ರತೀಕ್ಷಾ, ಅಕ್ಷಿತಾ, ಗಗನ ಹಾಗೂ ಪುಣ್ಯ ಕರ್ನಾಟಕ ಜೂನಿಯರ್ ಮಹಿಳಾ ತಂಡದಲ್ಲಿ ಪ್ರಾತಿನಿಧ್ಯ ಪಡೆದಿರುವ ಕೊಡಗಿನ ಪ್ರತಿಭೆಗಳಾಗಿದ್ದಾರೆ. ವಿಶೇಷವೆಂದರೆ ಕೊಡಗಿನ ಮನೀಶ್ ಪೂವಮ್ಮ ನಾಯಕಿ ಆಗಿದ್ದರೆ ಪ್ರತೀಕ್ಷಾ ಉಪನಾಯಕಿ ಆಗಿದ್ದಾರೆ. ಉಳಿದಂತೆ ಕರ್ನಾಟಕ ತಂಡದಲ್ಲಿ ಹರ್ಷಿತಾ, ದೀಪಿಕಾ, ನೇಹಾ, ಋಷಾಶ್ರೀ, ಲಿಪ್ಪಿಕಾ, ಮೆಹರ್, ವೈಷ್ಣವಿ ಹಾಗೂ ಪ್ರೀತಿಕಾ ಸ್ಥಾನ ಪಡೆದುಕೊಂಡಿದ್ದಾರೆ.

ಬಿ ಪೂಲ್‌ನಲ್ಲಿ ಇರುವ ಕರ್ನಾಟಕ ತಂಡವನ್ನು ಎ ಪೂಲ್‌ಗೆ ಅರ್ಹತೆ ಗಿಟ್ಟಿಸುವ ಮಹತ್ವದ ಗುರಿಯನ್ನು ಹೊಸ ಕರ್ನಾಟಕ ರಾಜ್ಯ ಜೂನಿಯರ್ ಮಹಿಳಾ ಹಾಕಿ ತಂಡ ಹೊಂದಿದೆ. ಗ್ವಾಲಿಯರ್‌ನಲ್ಲಿ ನಡೆದ ಆಲ್ ಇಂಡಿಯಾ ಪಂದ್ಯಾವಳಿ ಕಂಚಿನ ಪದಕ ಗೆದ್ದಿರುವ ಹುರುಪಿನಲ್ಲಿ ಇರುವ ಆಟಗಾರ್ತಿಯರು ಪುಣೆಯಲ್ಲೂ ಅದೇ ಉತ್ಸಾಹ ಮತ್ತು ಲಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಕಾತುರದಿಂದ ಇದ್ದಾರೆ. ಜೂನಿಯರ್ ಭಾರತೀಯ ಹಾಕಿ ತಂಡದ ಆಯ್ಕೆ ಪ್ರಕ್ರಿಯೆಯೂ ನಡೆಯಲಿರುವುದರಿಂದ ಕರ್ನಾಟಕದ ಆಟಗಾರ್ತಿಯರ ಪಾಲಿಗೆ ಈ ಪಂದ್ಯಾವಳಿ ಮಹತ್ವದ್ದಾಗಿದೆ.