*ಗೋಣಿಕೊಪ್ಪ, ಆ. ೯: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ÷್ಯ ದಿಣಾಚರಣೆಯಂದು ೪೮ನೇ ವರ್ಷದ ಸ್ಪಿರಿಟ್ ಆಫ್ ಫ್ರೀಡಂ ರನ್ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ ತಿಳಿಸಿದ್ದಾರೆ.

ಆಗಸ್ಟ್ ೧೫ ರಂದು ಪೊನ್ನಂಪೇಟೆಯಿAದ ಗೋಣಿಕೊಪ್ಪವರೆಗೆ ಫ್ರೀಡಂ ರನ್ ಓಟ ನಡೆಯಲಿದ್ದು, ೬ ವಿಭಾಗಗಳಲ್ಲಿ ಸ್ಪರ್ಧಿಗಳು ಭಾಗವಹಿಸಬಹುದು. ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೊಲ್ ಪಂಪ್ ಆವರಣದಲ್ಲಿ ಸ್ಪರ್ಧೆ ಕೊನೆಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೧ ರಿಂದ ೪ ನೇ ತರಗತಿ, ೫ ರಿಂದ ೭ ನೇ ತರಗತಿ, ೮ ರಿಂದ ೧೦ ನೇ ತರಗತಿ, ಪ್ರಥಮ ಪಿಯುಸಿಯಿಂದ ಪದವಿ ವಿಭಾಗದ ಬಾಲಕ ಮತ್ತು ಬಾಲಕಿಯರು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮಹಿಳೆ ಮತ್ತು ಪುರುಷರು, ಹಿರಿಯರ ವಿಭಾಗದಲ್ಲಿ ಕೂಡ ಮಹಿಳೆ ಮತ್ತು ಪುರುಷರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಬೆಳಗ್ಗೆ ೬ ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಹೆಸರು ನೋಂದಾಯಿಸಿಕೊAಡು ಸ್ಪರ್ಧೆಯಲ್ಲಿ ಭಾಗವಹಿಸಬೇಕಿದೆ. ವಯಸ್ಸಿನ ದೃಢೀಕರಣಕ್ಕಾಗಿ ವಿದ್ಯಾರ್ಥಿಗಳು ಆಧಾರ್ ಪ್ರತಿ ಮತ್ತು ಶಿಕ್ಷಣ ಸಂಸ್ಥೆಯ ಪತ್ರ ನೀಡಬೇಕಿದೆ ಎಂದು ತಿಳಿಸಿದರು.

ಸ್ಪರ್ಧಿಗಳಿಗೆ ಸಾರಿಗೆ ವೆಚ್ಚ ಮತ್ತು ಕಾಡುಗಿಡಗಳನ್ನು ನೀಡಲಾಗುವುದು. ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೊಲ್ ಪಂಪ್ ಆವರಣದಲ್ಲಿ ಬೆಳಗ್ಗಿನ ಉಪಹಾರ ನೀಡಲಾಗುವುದು ಎಂದು ತಿಳಿಸಿದರು. ಉಮಾಮಹೇಶ್ವರಿ ಪೆಟ್ರೊಲ್ ಪಂಪ್ ಆಡಳಿತದಿಂದ ವರ್ಷಂಪ್ರತಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೊಳ್ಳಿಮಾಡ ಎ. ಕರುಂಬಯ್ಯ, ಖಜಾಂಚಿ ಎ.ಬಿ. ಮಾದಪ್ಪ ಉಪಸ್ಥಿತರಿದ್ದರು.