(ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಆ. ೧೦: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಂSಆಆಔ ಪಟ್ಟಿಯಲ್ಲಿರುವ ಮತದಾರರ ಹೆಸರು ಪ್ರಕಟಿಸಿದ ಬಳಿಕ ಹಲವು ಎಡವಟ್ಟುಗಳು ಆಗಿವೆ. ಕೊಡಗು ಜಿಲ್ಲೆಯಲ್ಲಿ ಜೀವಂತವಾಗಿರುವ ಮತದಾರರನ್ನೇ ಮೃತರ ಪಟ್ಟಿಗೆ ಸೇರಿಸಿರುವ ಘಟನೆ ನಡೆದಿದೆ.

ಎನ್ಯುಮರೇಶನ್ ಫಾರ್ಮ್ ಬಿಎಲ್‌ಒಗಳಿಗೆ ನೀಡಿದರೂ ಸಹಾ ಮೃತರು ಎಂದು ಂSಆಆಔ ಪಟ್ಟಿಗೆ ಸೇರಿಸಿ ಕೆಲವು ಕಡೆಗಳಲ್ಲಿ ಬಿಎಲ್‌ಒಗಳು ಎಡವಟ್ಟು ಮಾಡಿದ್ದಾರೆ.ರಾಜ್ಯದಲ್ಲಿ ಂSಆಆಔ ಪಟ್ಟಿಯಲ್ಲಿರುವ ಮತದಾರರ ಹೆಸರು ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಭಾನುವಾರದವರೆಗೆ ೨.೧೪ ಲಕ್ಷ ಮತದಾರರು ರೋಲ್ ಬ್ಯಾಕ್ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ೧೫೦೦ಕ್ಕೂ ಅಧಿಕಾರ ಮತದಾರರು ರೋಲ್ ಬ್ಯಾಕ್ ಆಗಿದ್ದಾರೆ.

ಮತಗಟ್ಟೆ ಅಧಿಕಾರಿಗಳು ಮತದಾರರು ಮೃತಪಟ್ಟಿದ್ದಾರೆ ಎಂದು ಧೃಡೀಕರಿಸಲು ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಬೇಕು.ಇಲ್ಲದಿದ್ದರೆ ಮಹಜರು ನಡೆಸುವ ವೇಳೆ ಕುಟುಂಬಸ್ಥರ ಅಥವಾ ಸ್ಥಳದಲ್ಲಿ ಇದ್ದವರಿಂದ ಸಹಿ ಪಡೆಯಬೇಕು. ಆದರೆ ಎನ್ಯುಮರೇಶನ್ ಫಾರ್ಮ್ ಬೇಗ ಅಪ್ಲೋಡ್ ಮಾಡಬೇಕು ಎಂಬ ನಿಟ್ಟಿನಲ್ಲಿ ತರಾತುರಿಯಲ್ಲಿ ಜೀವಂತ ಮತದಾರರನ್ನು ಮರಣ ಎಂದು ನಮೂದಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ೦೭ರ ಸಂಜೆಯವರೆಗೆ ಂSಆಆಔ ಪಟ್ಟಿಯಲ್ಲಿ ಮೃತರಾಗಿರುವ ಮತದಾರರ ಸಂಖ್ಯೆ ೧೩,೭೨೬ ಇತ್ತು.ಆದರೆ ಭಾನುವಾರ ಸಂಜೆ ಬಿಡುಗಡೆಯಾದ ಂSಆಆಔ ಮಾಹಿತಿಯಲ್ಲಿ ಮೃತಪಟ್ಟವರ ಸಂಖ್ಯೆ ೧೩,೭೦೫ಕ್ಕೆ ಇಳಿಕೆಯಾಗಿದೆ.

ಜೀವಂತವಾಗಿರುವ ಮತದಾರರನ್ನೇ ಮೃತರು ಎಂದು ಗುರುತಿಸಿದ್ದು, ಎರಡು ದಿನದಲ್ಲಿ ೨೧ ಮಂದಿ ಜೀವಂತ ಇದ್ದೇವೆ ಎಂದು ರೋಲ್ ಬ್ಯಾಕ್ ಮಾಡಿಕೊಂಡಿರುವುದು ಜಿಲ್ಲಾಡಳಿತ ಬಿಡುಗಡೆ ಮಾಡಿಕೊಂಡಿರುವ ಮಾಹಿತಿಯಿಂದಲೇ ಬಹಿರಂಗಗೊAಡಿದೆ. ಜಿಲ್ಲೆಯಲ್ಲಿ ಆಗಸ್ಟ್ ೦೯ರ ಸಂಜೆ ೪ ಗಂಟೆಯವರೆಗೆ, ೪,೬೮,೬೫೭ ಮತದಾರರಲ್ಲಿ, ೪,೦೫,೪೭೨ ಮತದಾರರ ಮಾಹಿತಿ ಡಿಜಿಟೈಸ್ ಆಗಿದೆ.

ಂbseಟಿಣ / ಶಾಶ್ವತವಾಗಿ ಸ್ಥಳಾಂತರ/ ಮೃತಪಟ್ಟ /ಎರಡು ಕಡೆ ಹೆಸರು ಹೊಂದಿರುವ/ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ ಇರುವ ಮತದಾರರ ಸಂಖ್ಯೆ ೬೩,೧೮೫ ಇದೆ. ಮೃತಪಟ್ಟ ಮತದಾರರ ಸಂಖ್ಯೆ ೧೩,೭೦೫, ಶಾಶ್ವತವಾಗಿ ಸ್ಥಳಾಂತರಗೊAಡ ಮತದಾರರ ಸಂಖ್ಯೆ ೩೩,೬೦೫, ಎರಡು ಕಡೆ ಹೆಸರು ಹೊಂದಿರುವ ಮತದಾರರ ಸಂಖ್ಯೆ, ೫,೯೬೫ ಂbseಟಿಣ ಮತದಾರರ ಸಂಖ್ಯೆ ೯,೭೯೨, ಇತರೆ ಕಾರಣಗಳಿಂದ ಸಲ್ಲಿಸದೇ ಇರುವವರು ೧೧೮ ಮತದಾರರು ಇದ್ದಾರೆ.

ರೋಲ್ ಬ್ಯಾಕ್ ಮಾಡಿಕೊಂಡ ಬಳಿಕ ಐದು ಗಂಟೆ ಕಾಯಬೇಕು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಸರು ತಪ್ಪಾಗಿ ಂSಆಆಔ ಪಟ್ಟಿಗೆ ಸೇರಿದ ಮತದಾರರು ರೋಲ್‌ಬ್ಯಾಕ್ ಮಾಡಿಸಿಕೊಂಡ ಬಳಿಕವೂ ಎಚ್ಚರ ವಹಿಸಬೇಕಾಗಿದೆ.

ಚುನಾವಣಾ ಅಧಿಕಾರಿಗಳ ಪ್ರಕಾರ, ರೋಲ್‌ಬ್ಯಾಕ್ ಮಾಡಿಸಿದ ನಂತರ ತಮ್ಮ ಗಣತಿ ನಮೂನೆಯ ಸ್ಥಿತಿ ಏನಾಯಿತು ಎಂದು ಮತದಾರರು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಮತದಾರರು ಮತ್ತೆ ತಮ್ಮ ಭಾಗದ ಃಐಔ ಅವರನ್ನು ಸಂಪರ್ಕಿಸಿ ನಮೂನೆಯ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಬಹುದು.

ಜತೆಗೆ, ಮತದಾರರು ಮತ್ತೆ ಂSಆಆಔ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ತಮ್ಮ ಹೆಸರು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಧಿಕಾರಿಗಳ ಪ್ರಕಾರ, ರೋಲ್‌ಬ್ಯಾಕ್ ಮಾಡಿದ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಿದ ನಂತರ, ಂSಆಆಔ ಪಟ್ಟಿಯಿಂದ ಅದು ಡಿಲೀಟ್ ಆಗಲು ೫ ಗಂಟೆ ತೆಗೆದುಕೊಳ್ಳುತ್ತದೆ. ಹೀಗಾಗಿ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಿದ ಒಂದು ದಿನದ ನಂತರ ಂSಆಆಔ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ.