ಪೊನ್ನಂಪೇಟೆ/ಗೋಣಿಕೊಪ್ಪಲು, ಆ. ೧೦: ಹಿಂದೂ ಜಾಗರಣಾ ವೇದಿಕೆ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಗೋಣಿಕೊಪ್ಪಲಿನಿಂದ ಪೊನ್ನಂಪೇಟೆವರೆಗೆ ಬೃಹತ್ ವಾಹನ ಜಾಥಾ ನಡೆಯಿತು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗಣ್ಯರು ಜಾಥಾಕ್ಕೆ ಚಾಲನೆ ನೀಡಿದರು. ದ್ವಿಚಕ್ರ ವಾಹನಗಳಲ್ಲಿ ಯುವಕ-ಯುವತಿಯರು ಮುಂಚೂಣಿಯಲ್ಲಿ ಸಾಗಿದರೆ, ನಂತರ ಕಾರು, ಜೀಪು ಸೇರಿದಂತೆ ಹಲವು ವಾಹನಗಳು ಸಾಲಾಗಿ ಜಾಥಾದಲ್ಲಿ ಪಾಲ್ಗೊಂಡವು.

ಜಾಥಾ ಆರ್‌ಎಂಸಿ ಆವರಣದಿಂದ ಹೊರಟು ಗೋಣಿಕೊಪ್ಪಲು ಮುಖ್ಯರಸ್ತೆ ಮೂಲಕ ಹೆಚ್‌ಪಿ ಪೆಟ್ರೋಲ್ ಬಂಕ್ ಸಮೀಪದ ಬೈಪಾಸ್ ರಸ್ತೆ ತಲುಪಿ, ಅಲ್ಲಿಂದ ಪೊನ್ನಂಪೇಟೆ ರಸ್ತೆ ಮಾರ್ಗವಾಗಿ ಪೊನ್ನಂಪೇಟೆ ಪಟ್ಟಣಕ್ಕೆ ಆಗಮಿಸಿ ಕೊಡವ ಸಮಾಜದಲ್ಲಿ ಸಮಾವೇಶಗೊಂಡಿತು. ಜಾಥಾದ ಹಿನ್ನೆಲೆಯಲ್ಲಿ ಪೊಲೀಸರು ಸುಗಮ ಸಂಚಾರಕ್ಕಾಗಿ ಇತರ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರು.ಜಾಥಾ ಉದ್ಘಾಟಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಪೊನ್ನಂಪೇಟೆ ತಾಲೂಕು ಸಹ ಸಂಯೋಜಕ ಪುತ್ತಾಮನೆ ಅನಿಲ್ ಪ್ರಸಾದ್, ಸ್ವಾತಂತ್ರ‍್ಯದ ಸಂದರ್ಭದಲ್ಲಿ ದೇಶ ವಿಭಜನೆಯಾದ ಹಿನ್ನೆಲೆಯ ಇತಿಹಾಸವನ್ನು ಪ್ರತಿಯೊಬ್ಬ ಭಾರತೀಯರೂ ಅರಿಯಬೇಕು. ಅಖಂಡ ಭಾರತದ ಪರಿಕಲ್ಪನೆ ಹಾಗೂ ದೇಶದ ಏಕತೆಗಾಗಿ ಸಂಕಲ್ಪ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಜಾಥಾ ಉದ್ಘಾಟನೆ ವೇಳೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ, ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್, ರಾಷ್ಟಿçÃಯ ಸ್ವಯಂ ಸೇವಕ ಸಂಘ ಪ್ರಾಂತ ಶಾರೀರಿಕ ಪ್ರಮುಖ್ ಸತೀಶ್ ಕುತ್ಯಾರ್ ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿರಿಯಪಂಡ ಎಂ. ರಾಜಾ ನಂಜಪ್ಪ, ತಾಲೂಕು ಸಹ ಸಂಯೋಜಕ್ ಸುಖೇಶ್, ಕಾರ್ಯಕರ್ತರುಗಳಾದ ದಿನೇಶ್, ಪುತ್ತಾಮನೆ ಯತೀಶ್, ಮಾಚಂಗಡ ನವೀನ್, ಗಣ್ಯರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಕುಂಞAಗಡ ಅರುಣ್ ಭೀಮಯ್ಯ, ಕಾಡ್ಯಮಾಡ ಭರತ್, ಅಮ್ಮತ್ತಿರ ಸುರೇಶ್, ಅಮೃತ್‌ರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಭಾರತದ ಸಂಸ್ಕೃತಿಯ ಉಳಿವಿಗೆ ಜನರ ಸಂಕಲ್ಪ ಕಾರಣ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಸುಳ್ಯದ ಸಾಮಾಜಿಕ ಕಾರ್ಯಕರ್ತ ರಾಜೇಶ್ ಮೆನಾಲ, ಪ್ರಾಚೀನ ಗ್ರೀಕ್ ಮತ್ತು ಮಾಯನ್ ನಾಗರಿಕತೆಗಳು ನಿರಂತರ ದಾಳಿಗಳ ಪರಿಣಾಮವಾಗಿ ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ. ಆದರೆ ಭಾರತ ಹಲವು ದಾಳಿಗಳನ್ನು ಎದುರಿಸಿಯೂ ತನ್ನ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಇದಕ್ಕೆ ದೇಶದ ಸಂಸ್ಕೃತಿ ಮತ್ತು ಮಣ್ಣಿನೊಂದಿಗೆ ನಿರಂತರವಾಗಿ ಬೆಸೆದುಕೊಂಡಿರುವ ಜನರ ಸಂಕಲ್ಪವೇ ಪ್ರಮುಖ ಕಾರಣವಾಗಿದೆ ಎಂದರು.೧೯೪೭ರಲ್ಲಿ ಸ್ವಾತಂತ್ರ‍್ಯ ದೊರೆತ ಸಂತೋಷದ ಜತೆಗೆ ದೇಶ ವಿಭಜನೆಯ ನೋವೂ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ. ವಿಭಜನೆಯಿಂದ ಪ್ರತ್ಯೇಕಗೊಂಡ ಭಾರತವನ್ನು ಮತ್ತೆ ಒಗ್ಗೂಡಿಸುವ ಸಂಕಲ್ಪದೊAದಿಗೆ ಪ್ರತಿವರ್ಷ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಗುತ್ತಿದ್ದು, ಇದಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜ್‌ಗುರು ಹಾಗೂ ಮದನ್ ಲಾಲ್ ಧಿಂಗ್ರಾ ಸೇರಿದಂತೆ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಿದ ಅವರು, ದೇಶದ ಮಣ್ಣು ಮತ್ತು ಸಂಸ್ಕೃತಿಯೊAದಿಗೆ ಭಾರತೀಯರಿಗೆ ಇರುವ ಭಾವನಾತ್ಮಕ ಸಂಬAಧ ವಿಶಿಷ್ಟವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ಹಿಂದೂ ಸಮಾಜ ಒಗ್ಗಟ್ಟಿನಿಂದ ನಿಲ್ಲುವ ಅಗತ್ಯವಿದೆ. ದೇಶ ವಿಭಜನೆ ಹಾಗೂ ಅದರ ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಜತೆಗೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.

ಚAದ್ರ ಉಡೋತ್ ಸ್ವಾಗತಿಸಿದರು. ಉಳುವಂಗಡ ಲೋಹಿತ್ ಭೀಮಯ್ಯ ದೇಶಭಕ್ತಿ ಗೀತೆ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಉಳುವಂಗಡ ಮಹಿತ್ ಸೋಮಯ್ಯ ‘ವಂದೇ ಮಾತರಂ’ ಗೀತೆ ಹಾಡಿದರು. ಜಿಲ್ಲಾ ಸಂಘ ಚಾಲಕ ಚೆಕ್ಕೇರ ಮನು ಕಾವೇರಪ್ಪ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಾಂತೆಯAಡ ತಿಮ್ಮಯ್ಯ, ಪುತ್ತಾಮನೆ ಯತೀಶ್ ಸೇರಿದಂತೆ ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.