ವೀರಾಜಪೇಟೆ, ಆ. ೧೧: ವೀರಾಜಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆ ತೆರವಾಗಿದ್ದ ಸ್ಥಾನಕ್ಕೆ ಭೂ ದಾಖಲೆಗಳ ಸಹಾಯಕ ನಿದೇರ್ಶಕರಾಗಿ ಪಿ.ಸಿ ಜನೀಶ್ ಕುಮಾರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಸುಳ್ಯz Àಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಸಿ ಜನೀಶ್ ಕುಮಾರ್ ಅವರು ಶುಕ್ರವಾರ ವೀರಾಜಪೇಟೆ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ ಸಂದರ್ಭ ಭೂ ದಾಖಲೆಗಳ ಕಚೇರಿಯ ಸಿಬ್ಬಂದಿಗಳು ಅವರನ್ನು ಬರಮಾಡಿಕೊಂಡರು. ಪೊನ್ನಂಪೇಟೆ ತಾಲೂಕಿಗೆ ಪ್ರತ್ಯೇಕವಾಗಿ ಭೂ ದಾಖಲೆಗಳ ಕಚೇರಿಯನ್ನು ಅಧಿಕೃತವಾಗಿ ಸರಕಾರ ಆರಂಭಿಸದ್ದರಿAದ ಶಾಸಕರ ಒತ್ತಾಯದ ಮೇರೆ ಪೊನ್ನಂಪೇಟೆಯಲ್ಲಿ ಕಚೇರಿಯನ್ನು ಆರಂಭಿಸಲಾಗಿತ್ತು. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ಒಬ್ಬರೇ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಕಾರ್ಯ ನಿರ್ವಹಿಸಲಿದ್ದಾರೆ.