ಮಡಿಕೇರಿ, ಆ. ೧೧: ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ವೀರಾಜಪೇಟೆಯ ಶ್ರೇಯಸ್ ಬಿ.ಎಂ. ಅವರಿಗೆ ಗಾನಸಿರಿ ಪ್ರಶಸ್ತಿ ದೊರೆತಿದೆ.
ಪರ್ವ ನ್ಯೂಸ್ ಚಾನೆಲ್ ವತಿಯಿಂದ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಸಿ. ಅಶ್ವತ್ಥ್ ಕಲಾಭವನದಲ್ಲಿ ನಡೆಯಿತು. ಪ್ರಶಸ್ತಿಯನ್ನು ಜನಪ್ರಿಯ ಹಿನ್ನೆಲೆ ಗಾಯಕಿ ಅನುರಾಧಾ ಭಟ್, ಕನ್ನಡ ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ, ಹಿನ್ನೆಲೆ ಗಾಯಕ ಅನಿಲ್ ಅಂಬಾರಿ ಹಾಗೂ ಪರ್ವ ನ್ಯೂಸ್ ಚಾನೆಲ್ ಮುಖ್ಯಸ್ಥ ಪ್ರದೀಪ್ ಹಿರೇಮಠ್ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.
ಶ್ರೇಯಸ್ ಬಿ.ಎಂ. ಅವರು ಪ್ರಸ್ತುತ ವೀರಾಜಪೇಟೆ ಪಟ್ಟಣದಲ್ಲಿ ಸಂಗೀತ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಗಾಯನ, ಗಿಟಾರ್ ಹಾಗೂ ಕೀಬೋರ್ಡ್ ತರಬೇತಿ ನೀಡುತ್ತಿದ್ದಾರೆ.