ನಾಪೋಕ್ಲು, ಆ. ೧೩: ಅಕ್ಕಪಡೆ ವತಿಯಿಂದ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಕಡೆಗಳಲ್ಲಿ ಅಪರಾಧ, ದೌರ್ಜನ್ಯ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ತಿಳಿಸಲಾಯಿತು.
ಅಪ್ಪಂಗಳ, ಪನ್ಯಾ, ಕಾರುಗುಂದ, ಚೇರಂಬಾಣೆ, ಐವತೋಕ್ಲುವಿಗೆ ಭೇಟಿ ಕೊಟ್ಟು ಅಕ್ಕಪಡೆಯ ಕಾರ್ಯವಿಧಾನ ಮತ್ತು ಸೈಬರ್ ಕ್ರೆöÊಂ, ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ, ಕೆಲಸದ ಸಮಯದಲ್ಲಿ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ಸೂಚಿಸಲಾಯಿತು.
ತುರ್ತು ಸಂದರ್ಭದಲ್ಲಿ ಸಹಾಯವಾಣಿಯನ್ನು ಬಳಸಿಕೊಂಡು ಮಾಹಿತಿಯನ್ನು ನೀಡುವಂತೆ ತಿಳಿಸಲಾಯಿತು.