ಮಡಿಕೇರಿ, ಆ. ೧೩: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕೊಡಗಿನ ಕಾವೇರಿ ಸನ್ನಿಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ.
ತಾ. ೧೬ ರ ಭಾನುವಾರದಂದು ಮುಖ್ಯಮಂತ್ರಿಯವರು ಬೆಂಗಳೂರಿನಿAದ ಬೆ. ೧೦ ಗಂಟೆಗೆ ಹೆಲಿಕಾಪ್ಟರ್ನಲ್ಲಿ ಹೊರಡಲಿದ್ದಾರೆ. ಭಾಗಮಂಡಲದ ಹೆಲಿಪ್ಯಾಡ್ಗೆ ೧೧ ಗಂಟೆಗೆ ತಲುಪಲಿದ್ದಾರೆ. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರÀ ತಲಕಾವೇರಿಗೆ ತೆರಳಲಿದ್ದಾರೆ. ಅಲ್ಲಿ ಕಾವೇರಿ ಹಾಗೂ ಅಗಸ್ತೆö್ಯÃಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ತಲಕಾವೇರಿಯಿಂದ ಮುಖ್ಯಮಂತ್ರಿಯವರು ಮಡಿಕೇರಿಗೆ ಕಾರಿನಲ್ಲಿ ಆಗಮಿಸಲಿದ್ದಾರೆ. ಆ ನಡುವೆ ಹೆಲಿಕಾಪ್ಟರ್ ಮಡಿಕೇರಿಯ ಹೆಲಿಪ್ಯಾಡ್ಗೆ ಬಂದು ಸೇರಿರುತ್ತದೆ. ಮಡಿಕೇರಿಯಲ್ಲಿ ಮಧ್ಯಾಹ್ನ ಸುಮಾರು ೧.೩೦ ರ ವೇಳೆ ನಡೆಯಲಿರುವ ವಿವಾಹ ಸಮಾರಂಭವೊAದರಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಮಡಿಕೇರಿಯಿಂದ ಹೆಲಿಕಾಪ್ಟರ್ನಲ್ಲಿ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದು “ಶಕ್ತಿ” ಸಂಪರ್ಕಿಸಿದಾಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ.