ಚೆಯ್ಯಂಡಾಣೆ, ಆ. ೧೪: ದೇಶದ ೮೦ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಸುನ್ನಿ ಯುವಜನ ಸಂಘ (ಎಸ್ ವೈಎಸ್) ಜಿಲ್ಲಾ ಸಮಿತಿಯ ನಿರ್ದೇಶನದಂತೆ ವೀರಾಜಪೇಟೆ ಝೋನ್ ಸಮಿತಿಯ ವತಿಯಿಂದ ‘ಪ್ರೆಸ್ ಇಂಡಿಯಾ’ ಅಭಿಯಾನದಡಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಎಸ್‌ವೈಎಸ್ ಸಾಂತ್ವನ ತಂಡದ ಸದಸ್ಯರು ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಕಸ ಹಾಗೂ ಅನಗತ್ಯ ಪೊದೆಗಳನ್ನು ಸ್ವಚ್ಛಗೊಳಿಸುವ ಮೂಲಕ ಆಸ್ಪತ್ರೆಯ ಪರಿಸರವನ್ನು ಶುಚಿಗೊಳಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ಸ್ವಾತಂತ್ರ‍್ಯೋತ್ಸವವನ್ನು ಸಮಾಜಮುಖಿ ಸೇವೆಯ ಮೂಲಕ ಆಚರಿಸುವ ಮೂಲಕ ತಂಡ ಗಮನ ಸೆಳೆಯಿತು. ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ನೇತಾರ ಅಹ್ಮದ್ ಮದನಿ ಉದ್ಘಾಟಿಸಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಶಸ್ತçಚಿಕಿತ್ಸಕರಾದ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ಆಸ್ಪತ್ರೆಯ ಸ್ವಚ್ಛತೆ ಹಾಗೂ ಪರಿಸರದ ನಿರ್ವಹಣೆಗೆ ಇಂತಹ ಸೇವಾ ಕಾರ್ಯಗಳು ಮಹತ್ವದ್ದಾಗಿವೆ. ವಿಶಾಲವಾದ ಆಸ್ಪತ್ರೆ ಆವರಣದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಸ್‌ವೈಎಸ್ ತಂಡ ಸ್ವಯಂಪ್ರೇರಿತವಾಗಿ ಕೈಗೊಂಡಿರುವುದರಿAದ ಆಸ್ಪತ್ರೆಯ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಪ್ರತಿ ವರ್ಷ ಸ್ವಾತಂತ್ರೊö್ಯÃತ್ಸವದ ಸಂದರ್ಭ ಆಸ್ಪತ್ರೆಯ ನೆರವಿಗೆ ನಿಂತು ಸೇವೆ ಸಲ್ಲಿಸುತ್ತಿರುವ ಎಸ್‌ವೈಎಸ್ ಸಾಂತ್ವನ ತಂಡದ ಕಾರ್ಯ ಶ್ಲಾಘನೀಯ ಎಂದರು.

ವೀರಾಜಪೇಟೆ ಮಾಜಿ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ ಅವರು, ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಎಸ್‌ವೈಎಸ್ ಸಾಂತ್ವನ ತಂಡವು ಪ್ರತಿವರ್ಷ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರ ಸ್ವಚ್ಛತೆ ಹಾಗೂ ಸ್ವಚ್ಛ, ಸುಂದರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ತಂಡದ ಸೇವೆ ಅಭಿನಂದನಾರ್ಹವಾಗಿದೆ ಎಂದು ಹೇಳಿದರು.

ಸ್ಥಳೀಯರಾದ ಯಜಾಜ್, ಸಮಾಜವಾದಿ ಪಕ್ಷದ ದಿವಿಲ್ ಕುಮಾರ್ ಸೇರಿದಂತೆ ಹಲವರು ಎಸ್‌ವೈಎಸ್ ತಂಡದ ಸೇವಾ ಕಾರ್ಯವನ್ನು ಪ್ರಶಂಸಿಸಿ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವಲ್ಲಿ ಸಂಘಟನೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಎಸ್‌ವೈಎಸ್ ವೀರಾಜಪೇಟೆ ಝೋನ್ ಅಧ್ಯಕ್ಷ ಹಂಝ ಮದನಿ, ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಿಯಾಬುದ್ದೀನ್ ತಂಙಳ್, ಜಿಲ್ಲಾ ಸಮಿತಿಯ ಇಸಾಬ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ, ಸಲಾಂ ಗೋಣಿಕೊಪ್ಪ, ಸಿದ್ದಿಕ್ ಸಿದ್ದಾಪುರ, ಉಬೈದ್, ನೌಶಾದ್ ಗುಂಡಿಕೆರೆ, ಫಕ್ರುದ್ದೀನ್, ಜಾಫರ್ ಮಿಸ್ಬಾಹಿ, ಜಲೀಲ್ ಅಮೀನಿ, ಆಲಿ, ಕಬೀರ್ ಕಡಂಗ, ಸ್ವಾದಿಕ್ ಮಿಸ್ಬಾಹಿ, ನಝೀರ್ ಸೇರಿದಂತೆ ಎಸ್‌ವೈಎಸ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.