ಗೋಣಿಕೊಪ್ಪಲು, ಆ. ೧೪: ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ನಮ್ಮೆ - ೨೦೨೬ ಕಾರ್ಯಕ್ರಮ ಸಂಭ್ರಮದಿAದ ಜರುಗಿತು. ಕಕ್ಕಡ ಮಾಸದ ವಿಶೇಷ ಖಾದ್ಯಗಳೂ, ತಿಂಡಿ ತಿನಿಸು, ಮದ್ದು ಪಾಯಸದ ಸವಿ, ಸ್ಪರ್ಧೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಸಂತಸ ಹಂಚಿಕೊAಡರು.

ಅತ್ತೂರಿನ ಪಾಲ್ಮ್ ವ್ಯಾಲಿ ರೆಸಾರ್ಟ್ನಲ್ಲಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜುದೇವಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಕಲಾವಿದೆ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ಸಭೆಯಲ್ಲಿದ್ದ ಗಣ್ಯರೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭ ಮಾತನಾಡಿದ ಸನ್ಮಾನಿತರಾದ ನಿರ್ಮಲ ಬೋಪಣ್ಣ, ಸಾಮಾನ್ಯವಾಗಿ ಕಕ್ಕಡ ತಿಂಗಳಿನಲ್ಲಿ ಜಡಿ ಮಳೆ ಇರುತಿತ್ತು. ಆದರೆ ಈ ವರ್ಷದ ಮಳೆ ಬಹಳ ಕ್ಷೀಣಿಸಿದೆ ಎಂದರು. ಮೊದಲ ಭಾರಿಗೆ ಪೊಮ್ಮಕ್ಕಡ ಕೂಟದವರು ತಮ್ಮನ್ನು ಗಾನ ಕೋಗಿಲೆ ಎಂದು ಬಿಂಬಿಸಿದ್ದು ಸಂತಸ ತಂದಿದೆ ಎಂದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ವಿಜು ದೇವಯ್ಯ ಅವರು ಮಾತನಾಡಿ, ಗಾನಕೋಗಿಲೆ ನಿರ್ಮಲ ಬೋಪಣ್ಣ ಅವರನ್ನು ಪೊಮ್ಮಕ್ಕಡ ಕೂಟದ ವತಿಯಿಂದ ಸನ್ಮಾನಿಸಬೇಕೆಂಬ ಕನಸು ಬಹಳ ದಿನಗಳಿಂದ ಇತ್ತು. ಇಂದು ಆ ಅವಕಾಶ ದೊರೆತಿರುವುದು ಸಂತಸ ತಂದಿದೆ. ನಮ್ಮ ಕೊಡವ ಜನಾಂಗದಲ್ಲಿ ಇಂತಹ ಅನೇಕ ಪ್ರತಿಭಾವಂತರು ಇದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳಕಿಗೆ ತರುವಂತಹ ಕಾರ್ಯವನ್ನು ನಾವು ಮಾಡಬೇಕು ಎಂದು ಹೇಳಿದರು. ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ಸಿಗಲಿ ಎಂದರು.

ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧ ಬಗೆಯ ಸಂಪ್ರದಾಯಿಕ ಖಾದ್ಯಗಳ ಪ್ರದರ್ಶನ ಗಮನಸೆಳೆಯಿತು. ರುಚಿಕರ ಖಾದ್ಯ ತಯಾರಿಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಕೊಡವ ಸಮುದಾಯದ ಸಾಂಪ್ರದಾಯಿಕ ಉಡುಗೆ ಧರಿಸಿದ ಗೃಹಿಣಿಯರಿಗೆ ಬಹುಮಾನ ವಿತರಿಸಲಾಯಿತು. ಅತಿಥಿಗಳಾಗಿ ರಾಧಾ ಅಚ್ಚಯ್ಯ, ಕುಸುಮ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.