ಮಡಿಕೇರಿ, ಆ. ೧೪: ನಗರದ ಪ್ರಮುಖ ಮಹಾತ್ಮಾ ಗಾಂಧಿ ರಸ್ತೆ

(ರಾಜಾಸೀಟ್ ರಸ್ತೆ) ಕಾಮಗಾರಿ ಆರಂಭಗೊAಡಿದ್ದು, ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಹೊಂಡ-ಗುAಡಿಗಳಾಗಿ ತೀರಾ ಹದಗೆಟ್ಟು ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ದುಸ್ತರವಾಗಿದ್ದ ಎಂಜಿ ರಸ್ತೆಯ ಕಾಂಕ್ರಿಟ್ ರಸ್ತೆ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಮಂಜೂರು ಮಾಡಿದ್ದ ರೂ. ೧.೫೦ ಕೋಟಿ ಅನುದಾನವನ್ನು ಬಳಕೆ ಮಾಡಿಕೊಂಡು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೇ.ಮಂಗೇರಿರ ಮುತ್ತಣ್ಣ ವೃತ್ತದಿಂದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದವರೆಗೆ ನೂತನ ರಸ್ತೆ ನಿರ್ಮಾಣವಾಗಲಿದೆ. ಪ್ರಾರಂಭಿಕವಾಗಿ ಗುಂಡಿ ಬಿದ್ದಿರುವ ಡಾಮರು ರಸ್ತೆಯನ್ನು ಅಗೆದು ಜಲ್ಲಿಕಲ್ಲುಗಳನ್ನು ಅಳವಡಿಸಲಾಗುವದು. ನಂತರ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣದೊಂದಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುವದು. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ರಾಜಾಸೀಟ್ ರಸ್ತೆ ದುರವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕೊನೆಗೂ ಈ ರಸ್ತೆಗೆ ಮುಕ್ತಿ ಸಿಕ್ಕಂತಾಗಿದೆ.

ಸAಚಾರ ಬದಲಾವಣೆ

ರಸ್ತೆ ಕಾಮಗಾರಿ ಆರಂಭವಾಗಿರುವದರಿAದ ನಗರದಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಕುಸಿದ ಹಿನ್ನೆಲೆಯಲ್ಲಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್ ಹಾಗೂ ಭಾರೀ ವಾಹನಗಳು ರಾಜಾಸೀಟ್ ಮಾರ್ಗವಾಗಿ ಎಸ್‌ಬಿಐ ಮೂಲಕ ನಿಲ್ದಾಣಕ್ಕೆ ಆಗಮಿಸಿ ನಂತರ ಕೈಗಾರಿಕಾ ಬಡಾವಣೆಗಾಗಿ ತೆರಳಿ ರಾಜಾಸೀಟ್ ಮಾರ್ಗವಾಗಿ ಜ.ತಿಮ್ಮಯ್ಯ ವೃತ್ತವನ್ನು ಸೇರಬೇಕಾಗಿತ್ತು. ಖಾಸಗಿ ಬಸ್‌ಗಳು ಜ.ತಿಮ್ಮಯ್ಯ ವೃತ್ತದಿಂದ ನೇರವಾಗಿ ಹಳೆ ಖಾಸಗಿ ಬಸ್ ನಿಲ್ದಾಣಕ್ಕಾಗಮಿಸಿ ಅದೇ ಮಾರ್ಗವಾಗಿ ಹಿಂತೆರಳಬೇಕಿತ್ತು. ಹಾಗೆಯೇ ಸಾರಿಗೆ ಬಸ್ ನಿಲ್ದಾಣದ ಬಳಿಯಿಂದ ಹಳೆ ಖಾಸಗಿ ಬಸ್ ನಿಲ್ದಾಣದ ಕಡೆಗೆ ಲಘು ವಾಹನಗಳಿಗೆ ಏಕಮುಖವಾಗಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿತ್ತು.

ಇದೀಗ ಖಾಸಗಿ ಬಸ್‌ಗಳು ರಾಜಾಸೀಟ್ ಮಾರ್ಗವಾಗಿ ಹೊಸ ಬಸ್ ನಿಲ್ದಾಣಕ್ಕಾಗಮಿಸಿ ಕೈಗಾರಿಕಾ ಬಡಾವಣೆಗಾಗಿ ಹಳೆ ಖಾಸಗಿ ಬಸ್ ನಿಲ್ದಾಣದ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಜ.ತಿಮ್ಮಯ್ಯ ವೃತ್ತದಿಂದ ನೇರವಾಗಿ ಬಸ್ ನಿಲ್ದಾಣಕ್ಕಾಗಮಿಸಿ ಅದೇ ಮಾರ್ಗವಾಗಿ ವಾಪಸ್ ತೆರಳಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವದರಿಂದ ತಾತ್ಕಾಲಿಕವಾಗಿ ಬದಲಾವಣೆ ಮಾಡಿರುವದಾಗಿ ನಗರ ಸಂಚಾರಿ ಠಾಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.