ಮಡಿಕೇರಿ, ಆ. ೧೪: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡಗು ಜಿಲ್ಲೆಯಾದ್ಯಂತ ಆಯೋಜಿಸಿರುವ ಕೊಡವ ಜನಸಂಪರ್ಕ ಅಭಿಯಾನ ಮಾನವ ಸರಪಳಿ ಕಾರ್ಯಕ್ರಮ ತಾ.೧೭ ರಂದು ಬಿರುನಾಣಿಯಿಂದ ಆರÀಂಭವಾಗಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ತಿಳಿಸಿದ್ದಾರೆ. ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಬಿರುನಾಣಿಯಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ ೩೭೧, ೫ ಮತ್ತು ೬ ರ ಅಡಿಯಲ್ಲಿ ಸ್ವಯಂ ಆಡಳಿತ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಕೊಡವ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.