ಪೊನ್ನಂಪೇಟೆ, ಆ. ೧೪: ಪೊನ್ನಂಪೇಟೆ ತಾಲೂಕಿನ ಕೋತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೫೦ನೇ ವಾರ್ಷಿಕ ಮಹಾಸಭೆ ಸಂಘದ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಂಘದ ೫೦ ವರ್ಷದ ಮಹಾಸಭೆಯ ಸವಿನೆನಪಿಗಾಗಿ, ಎಲ್ಲಾ ಸದಸ್ಯರಿಗೆ ಒಂದೊAದು ಹಣ್ಣಿನ ಗಿಡವನ್ನು ವಿತರಿಸಲಾಯಿತು. ಅಧ್ಯಕ್ಷ ಪೆಮ್ಮಂಡ ವಿ. ಭರತ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಟಿಮಾಡ ಎ. ಗಿರಿ ಅವರಿಗೆ ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಂಘದ ಸದಸ್ಯರಾದ ದೇಯಂಡ ಸಂತೋಷ್ ಅವರ ಸಲಹೆ ಮೇರೆಗೆ, ಸಂಘದ ಪ್ರತಿ ಸದಸ್ಯರಿಗೆ ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ೫೦ ವರ್ಷದ ಹಿಂದೆ ಸ್ಥಾಪನೆಯಾದ ಸಂಘವು ೫೦ ವರ್ಷ ಪೂರೈಸಿದ್ದು, ೧೫೩೪ ಸದಸ್ಯರಿದ್ದಾರೆ. ಸಂಘದಿAದ ನೀಡಿದ ಹಣ್ಣಿನ ಗಿಡವನ್ನು ಸದಸ್ಯರು ತಮ್ಮ ಜಮೀನಿನಲ್ಲಿ ಗಿಡ ನೆಟ್ಟು ಪೋಷಿಸಿ, ಆ ಗಿಡ ಫಲ ಬಿಟ್ಟಾಗ ಅವರಿಗೆ ನಮ್ಮ ಸಂಘದ ೫೦ನೇ ಮಹಾ ಸಭೆಯ ನೆನಪಾಗಲಿ ಎಂದರು. ಸಭೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ತಾಣಚ್ಚಿರ ಯು. ದೀಪಕ್, ನಿರ್ದೇಶಕರಾದ ದೇಯಂಡ ಟಿ. ಅಯ್ಯಣ್ಣ, ದೇಯಂಡ ಪಿ. ಬೋಪಣ್ಣ, ಕೊಟ್ಟಂಗಡ ಸಿ. ನಾಣಯ್ಯ, ಕೊಳ್ಳಿಮಾಡ ಎಂ. ಕಾವೇರಪ್ಪ, ಮಾಚಿಮಾಡ ಜಿ. ಉತಪ್ಪ, ಕೊಳ್ಳಿಮಾಡ ಕೆ. ಲಲಿತ, ಪೆಮ್ಮಂಡ ಡಿ. ಪುಷ್ಪ, ಪರಿವಾರರ ಡಿ. ಲವಕುಮಾರ್, ಕೊಟ್ಟಂಗಡ ಯು. ಸದಾಶಿವ, ಮಡಿವಾಳರ ಎನ್. ಚಂದ್ರ ಹಾಗೂ ಸದಸ್ಯರು ಇದ್ದರು.