ನಾಪೋಕ್ಲು, ಆ. ೧೩: ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೂರ್ನಾಡು ಗೌಡ ಸಮಾಜದಲ್ಲಿ ಆಟಿ ಹಬ್ಬ ಆಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪÀಳ್ಳಿ ರವೀಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮಹಿಳಾ ಒಕ್ಕೂಟದ ಕಾರ್ಯಸಾಧನೆ ಅದ್ಭುತವಾದದ್ದು. ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಜನರಿಗೆ ಅದರ ಮಹತ್ವವನ್ನು ತಿಳಿಸಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕು. ಇದಕ್ಕೆ ತನ್ನ ಸಹಕಾರವಿರುತ್ತದೆ. ಮಹಿಳೆಯರ ಸಾಧನೆ ವಿಶ್ವಮಟ್ಟದಲ್ಲಿ ಪಸರಿಸುವಂತಾಗಬೇಕೆAದು ಹೇಳಿದರಲ್ಲದೆ, ಒಕ್ಕೂಟಕ್ಕೆ ರೂ. ೫೦ ಸಾವಿಸ ದೇಣಿಗೆ ನೀಡಿದರು.

ನಿವೃತ್ತ ಡಿಸ್ಟಿçಕ್ ನರ್ಸಿಂಗ್ ಆಫೀಸರ್ ಬೈಲೊಳಿ ಕುಸುಮ ಅವರು ಆಟಿ ಹಬ್ಬದ ವಿಶೇಷ ಅಡುಗೆಗಳ ಪ್ರದರ್ಶನವನ್ನು ಉದ್ಘಾಟಿಸಿ ಇಂತಹ ವಿಶೇಷ ಆಟಿ ಅಡುಗೆ-ತಿಂಡಿಗಳು ನಮ್ಮ ಅಡುಗೆ ಮನೆಯಲ್ಲಿ ತಯಾರಾಗುವುದರೊಂದಿಗೆ ನಮ್ಮ ಆರೋಗ್ಯವು ಹೆಚ್ಚುತ್ತದೆ. ಇದರ ಹಿಂದೆ ಮಹಿಳೆಯರ ಶ್ರಮ ಹಾಗೂ ಪುರುಷರ ಪ್ರೋತ್ಸಾಹ ಇದೆ ಎಂದು ನುಡಿದರು.

ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಹರೀಶ ಮಾತನಾಡಿ, ಇಂದಿನ ಕಾರ್ಯಕ್ರಮ ತುಂಬಾ ಮಹತ್ವಪೂರ್ಣವಾದದ್ದು. ನಾವೆಲ್ಲ ರೈತಾಪಿ ವರ್ಗದಿಂದ ಬಂದಿದ್ದರೂ ಇಂದು ಎಲ್ಲರೂ ಕೃಷಿಯನ್ನು ಮರೆಯುತ್ತಿದ್ದಾರೆ. ಆದುದರಿಂದ ನಾವೆಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು, ನಮ್ಮ ಮಕ್ಕಳಿಗೂ ಕೂಡ ಕೃಷಿಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಇದರಿಂದ ನಮ್ಮ ಜನಾಂಗದ ಪರಂಪರೆ ಉಳಿಯುವುದು ಎಂದರು. ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಲ್ಲುಮುಟ್ಲು ಜಸ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೂರ್ನಾಡು ಸುತ್ತಮುತ್ತಲಿನ ಮಹಿಳಾ ಸದಸ್ಯರು ಆಟಿ ಸೊಪ್ಪು, ಮರ ಕೆಸ, ಕಣಿಲೆ, ಅಣಬೆ, ಏಡಿ, ಹಲಸಿನ ಹಣ್ಣು, ಹಲಸಿನ ಬೀಜ ಮುಂತಾದ ಬಗೆಬಗೆಯ ಆಟಿ ತಿಂಗಳ ತಿಂಡಿ ತಿನಿಸುಗಳನ್ನು ತಯಾರಿಸಿದ್ದು ಎಲ್ಲರ ಗಮನ ಸೆಳೆಯಿತು.