ಮಡಿಕೇರಿ, ಆ. ೧೫: ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ, ಜಿಲ್ಲಾಡಳಿತ, ಕೊಡಗು ಜಿಲ್ಲೆ ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆ, ಮಡಿಕೇರಿ. ಕೊಡಗು ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯುವಕ ಸಂಘ, ಅಯ್ಯಂಗೇರಿ ಇದರ ಸಂಯುಕ್ತ ಆಶ್ರಯದಲ್ಲಿ ೩೪ನೇ ವರ್ಷದ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳನ್ನು ತಾ. ೨೨ ರಂದು ಆಯೋಜಿಸಲಾಗಿದೆ.

ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳ ಕುರಿತು ಕ್ರೀಡಾ ಇಲಾಖೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದಿನಾಂಕವನ್ನು ನಿಗದಿ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.

ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ತಾ. ೨೧ ರೊಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.

ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪಿ.ಪಿ. ಸುಕುಮಾರ್, ಕೆ. ಮಧು ಮೋಹನ್, ಶ್ರೀಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ಗೌರವ ಅಧ್ಯಕ್ಷ ಜೀವನ್ ಕುಮಾರ್, ಉಪಾಧ್ಯಕ್ಷ ರೀತನ್, ಸದಸ್ಯರಾದ ಪ್ರತೀಶ್ ಹಾಗೂ ಮಂಜು ಉಪಸ್ಥಿತರಿದ್ದರು.

ಹಗ್ಗಜಗ್ಗಾಟ ಸ್ಪರ್ಧೆ

ಸಾರ್ವಜನಿಕ ಪುರುಷರ ವಿಭಾಗ ೭ ಜನರ ತಂಡ, ಹಗ್ಗಜಗ್ಗಾಟ ಸಾರ್ವಜನಿಕ ಮಹಿಳೆಯರ ವಿಭಾಗ ೭ ಜನರ ತಂಡ, ವಾಲಿಬಾಲ್ ಸಾರ್ವಜನಿಕ ಪುರುಷರ ವಿಭಾಗ ೪ ಜನರ ತಂಡ, ಥ್ರೋಬಾಲ್ ಸಾರ್ವಜನಿಕ ಮಹಿಳೆಯರ ವಿಭಾಗ ೬ ಜನರ ತಂಡ.

ಕೆಸರು ಗದ್ದೆ ಓಟದ ಸ್ಪರ್ಧೆಗಳು

ಕಿರಿಯರ ಪ್ರಾಥಮಿಕ ಶಾಲಾ ಬಾಲಕರು ಹಾಗೂ ಬಾಲಕಿಯರಿಗೆ (೧ ರಿಂದ ೪ನೇ ತರಗತಿಯವರೆಗೆ), ಹಿರಿಯರ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ (೫ ರಿಂದ ೭ ತರಗತಿಯವರೆಗೆ), ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರಿಗೆ (೮ ರಿಂದ ೧೦ನೇ ತರಗತಿಯವರೆಗೆ), ಪದವಿಪೂರ್ವ ಕಾಲೇಜು ಬಾಲಕ ಹಾಗೂ ಬಾಲಕಿಯರಿಗೆ, ಪದವಿ ಕಾಲೇಜು ಬಾಲಕ ಹಾಗೂ ಬಾಲಕಿಯರಿಗೆ, ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ಮುಕ್ತ ಓಟ, ಆಯೋಜಕರಿಗೆ ಓಟದ ಸ್ಪರ್ಧೆ ನಡೆಯಲಿದೆ.

ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ವಿ.ಟಿ. ವಿಸ್ಮಯಿ ಮಾಹಿತಿ ನೀಡಿದರು.

ತಂಡಗಳು ತಾ. ೨೧ ಸಂಜೆ ೫ ಗಂಟೆಯ ಒಳಗಾಗಿ ತಂಡದ ಹೆಸರು ನೋಂದಾವಣೆ ಮಾಡಿ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು.ವಾಲಿಬಾಲ್, ಥ್ರೋಬಾಲ್ (ಪುರುಷ - ಮಹಿಳಾ) ತಂಡಗಳು ತಾ. ೨೧ ಸಂಜೆ ೫ ಗಂಟೆಯ ಒಳಗಾಗಿ ತಂಡದ ಹೆಸರು ನೋಂದಾವಣೆ ಮಾಡಿ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು. ಕ್ರೀಡಾ ಸ್ಪರ್ಧೆಗಳನ್ನು ಬೆಳಿಗ್ಗೆ ೯ ಗಂಟೆಯಿAದ ಪ್ರಾರಂಭಿಸಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ (ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ) ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಓಟದ ಸ್ಪರ್ಧೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪಾರಿತೋಷಕ ಮತ್ತು ನಗದು ಹಾಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು. ವಾಲಿಬಾಲ್, ಥ್ರೋಬಾಲ್ ನೋಂದಣಿ ಮಾಡುವವರು ಅಭಿಷೇಕ್ ೬೩೬೧೬೨೧೬೪೩/ ೭೩೩೭೭೭೯೮೩೩, ಹಗ್ಗಜಗ್ಗಾಟ ಬಿದ್ದಿಯಂಡ ಸುಭಾಷ್ ೯೮೪೫೦೫೩೫೦೧/ ೮೪೩೧೮೧೬೫೯೩.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ

ಬಾಳಾಡಿ ದಿಲೀಪ್ ಕುಮಾರ್, ಅಧ್ಯಕ್ಷರು, ತಾಲೂಕು ಯುವ ಒಕ್ಕೂಟ ಮಡಿಕೇರಿ-೮೬೧೮೫೬೮೧೭೩, ಪಿ.ಪಿ. ಸುಕುಮಾರ್ ನಿಕಟಪೂರ್ವ ಅಧ್ಯಕ್ಷರು, ಕೊಡಗು ಜಿಲ್ಲಾ ಯುವ ಒಕ್ಕೂಟ ಮಡಿಕೇರಿ-೯೪೮೧೨೧೩೯೨೦, ಲತೇಶ್, ಅಧ್ಯಕ್ಷರು, ಶ್ರೀ ಕೃಷ್ಣ ಯುವಕ ಸಂಘ, ಅಯ್ಯಂಗೇರಿ - ೯೪೮೩೬೬೨೬೧೦, ಜೀವನ್ ಕುಮಾರ್, ಗೌರವ ಅಧ್ಯಕ್ಷರು, ಶ್ರೀ ಕೃಷ್ಣ ಯುವಕ, ಸಂಘ, ಅಯ್ಯಂಗೇರಿ -೯೩೫೩೪೨೬೦೭೩, ರಿತನ್ ಬಿ.ಪಿ. ಉಪಾಧ್ಯಕ್ಷರು, ಶ್ರೀಕೃಷ್ಣ ಯುವಕ, ಸಂಘ, ಅಯ್ಯಂಗೇರಿ- ೭೩೩೭೭೭೯೮೩೩, ಪ್ರತೀಶ್, ಸದಸ್ಯರು, ಶ್ರೀ ಕೃಷ್ಣ ಯುವಕ, ಸಂಘ, ಅಯ್ಯಂಗೇರಿ- ೮೨೧೭೮೦೧೩೩೬, ಮಂಜು ಬಿ.ಪಿ., ಸದಸ್ಯರು, ಶ್ರೀಕೃಷ್ಣ ಯುವಕ, ಸಂಘ ಅಯ್ಯಂಗೇರಿ- ೯೬೩೨೦೬೨೧೦೭.