ನಾಪೋಕ್ಲು, ಆ. ೧೫ : ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸುಕುಮಾರ್ ಟಿ.ಪಿ. ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಮ್ಮದ್ ಹಾಗೂ ಸತೀಶ್, ಕಾರ್ಯದರ್ಶಿಯಾಗಿ ಹಂಸ, ಸಹಕಾರ್ಯದರ್ಶಿಯಾಗಿ ಮಿಥುನ್ ಹಾಗೂ ಶಬರಿ, ಖಜಾಂಚಿಯಾಗಿ ಚೇತನ್, ಗೌರವ ಅಧ್ಯಕ್ಷರಾಗಿ ರಝಾಕ್, ಸಲಹೆಗಾರರಾಗಿ ಪವನ್ ಪೆಮ್ಮಯ್ಯ, ಬಿದ್ದಾಟಂಡ ರೋಜಿ ಚಿನ್ನಪ್ಪ, ದುಗ್ಗಳ ಸದಾನಂದ, ಆಡಳಿತ ಮಂಡಳಿ ನಿರ್ದೇಶಕರಾಗಿ ಶ್ರೀಜೇಸ್, ಅಶ್ರಫ್, ಮಹೇಶ್, ಗೌತಮ್, ಝಕ್ರಿಯ, ರಿಯಾಜ್, ಆನಂದ, ಸುರೇಶ್, ದೀಪು, ಜಾಫರ್, ಜೀವನ್ ರಾಜ್, ಕಿರಣ, ರಂಶೀದ್, ಖಾದರ್ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಸುಕುಮಾರ್ ಟಿ.ಪಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.