ಮಡಿಕೇರಿ, ಆ. ೧೮: ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮನವಿ ಮಾಡಿದರು.
ವಿಧಾನಸಭಾ ಅಧಿವೇಶನದ ಸಂದರ್ಭ ಈ ಕುರಿತು ಗಮನ ಸೆಳೆದ ಮಂತರ್ ಅವರು, ಎಸ್‌ಡಿಆರ್‌ಎಫ್ ಅಡಿ ಕೈಗೊಂಡ ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು, ಇದನ್ನು ಮರುಪರಿಶೀಲಿಸಿ ಹೊಸದಾಗಿ ಯೋಜನೆ ರೂಪಿಸುವ ಅಗತ್ಯತೆ ಏರ್ಪಟ್ಟಿದೆ. ಇದರೊಂದಿಗೆ ಲೋಕೋಪಯೋಗಿ ಹಾಗೂ ಜಿ.ಪಂ. ರಸ್ತೆ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಬೇಕಾಗಿದ್ದು, ಹಲವು ರಸ್ತೆಗಳು ಹದಗೆಟ್ಟಿದ್ದು, ಹೆಚ್ಚಿನ ಅನುದಾನವನ್ನು ಸರಕಾರ ಜಿಲ್ಲೆಗೆ ನೀಡಬೇಕೆಂದು ಕೋರಿದರು.