ಸುಂಟಿಕೊಪ್ಪ, ಅ. ೧: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ನಾಪಂಡ ಉಮೇಶ್ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ಒಟ್ಟು ೧,೭೦೯ ಸದಸ್ಯರುಗಳಿದ್ದಾರೆ. ಇವರೆಲ್ಲರ ಒಟ್ಟು ಪಾಲು ಬಂಡಾವಳ ರೂ. ೧,೨೩,೦೩,೬೩೫ ಗಳಾಗಿರುತ್ತದೆ. ಸದಸ್ಯತ್ವ ಪಡೆಯದೇ ಇರುವವರನ್ನು ಸದಸ್ಯರುಗಳನ್ನಾಗಿ ನೊಂದಾಯಿಸಿ ಪಾಲು ಬಂಡವಾಳ ಹೆಚ್ಚಿಸಲಾಗುವುದು ಠೇವಣಿಗಳನ್ನು ಸದಸ್ಯರಿಂದ ಹಾಗೂ ಸದಸ್ಯರಲ್ಲದವರಿಂದಲೂ ಸಂಗ್ರಹಿಸಲಾಗುತ್ತಿದ್ದು, ತಾ.೩೧-೩-೨೦೨೬ ಕ್ಕೆ ರೂ.೧೨೪೮,೭೬ ೭೮೭ ಠೇವಣಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕಿಂತ ೧,೬೮,೦೦,೪೯೭ ಹೆಚ್ಚು ಸಂಗ್ರಹಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಅಲ್ಪಾವಧಿಯವರೆಗೆ ನಿರಖು ಠೇವಣಿ ರೂ. ೫೪,೫೯,೧೪೭ ಇಡಲಾಗಿದೆ. ಕೆಡಿಸಿಸಿ ಬ್ಯಾಂಕ್ ಕ್ಷೇಮ ನಿಧಿ ಠೇವಣಿ ರೂ.೧,೪೧,೦೬,೫೦೩ ಹಾಗೂ ಪಾಲು ಹಣ ರೂ.೪೮,೦೦,೦೦೦ ಹೂಡಿಕೆ ಮಾಡಲಾಗಿದೆ.
ಕೆಸಿಸಿ ಸಾಲ ವರದಿ ಸಾಲಿನಲ್ಲಿ ೨೯೭ ಸದಸ್ಯರುಗಳಿಗೆ ರೂ೯,೦೯,೪೨,೦೦೦ ನೀಡಲಾಗಿದೆ. ಈ ಪೈಕಿ ರೂ. ೯,೦೯,೪೨,೯೦೦ ಕೆಡಿಸಿಸಿ ಬ್ಯಾಂಕ್ನಿAದ ಸಾಲ ವಿತರಿಸಿದ್ದು, ಸ್ವಂತ ಬಂಡವಾಳದಿAದ ಸಾಲ ವಿತರಿಸಿzಲ್ಲ ಇತ್ತೀಚಿನ ಸರಕಾರದ ಆದೇಶದಂತೆ ಏಕವ್ಯಕ್ತಿಯ ಆರ್ಟಿಸಿ ಅಗತ್ಯವಿದ್ದು, ಫಾರಂ ನಂ.೩ ನೊಂದಣಿಯಾಗುವ ಆರ್ಟಿಸಿಗಳಿಗೆ ಮಾತ್ರ ಸಾಲ ನೀಡಲು ಅವಕಾಶವಿದೆ ಹೆಚ್ಚಿನ ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಫಾರಂ ನಂ.೩ ಹಾಗೂ ರಾಜ್ಯ ಸರಕಾರದ ಆದೇಶದಂತೆ ಫ್ರೂಟ್ಸ್ ತಂತ್ರಾAಶದಲ್ಲಿ ಆರ್ಟಿಸಿ ನೋಂದಣಿಯಾಗದಿದ್ದರೆ ಶೂನ್ಯ ಬಡ್ಡಿ ದರವು ಅನ್ವಯವಾಗುವುದಿಲ್ಲ ಹಿಂದಿನ ಸಾಲಿನಲ್ಲಿ ವಿತರಿಸಿದ ಸಾಲದ ಪೈಕಿ ರೂ. ೧,೪೧,೦೦೦ ಹಳೆಬಾಕಿ ಸೇರಿ ಅವಧಿ ಮೀರಿದ ಸಾಲವಾಗಿರುತ್ತದೆ. ತಾ. ೩೧.೩.೨೦೨೬ ರ ನಂತರ ರೂ. ೧,೪೧,೦೦೦ ವಸೂಲಿಯಾಗಿದೆ ವರದಿ ದಿನಾಂಕಕ್ಕೆ ಬಾಕಿ ಇರುವುದಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.
ಆಭರಣ ಸಾಲ, ಸ್ವಸಹಾಯ ಗುಂಪು ಸಾಲ, ವಾಹನ ಸಾಲ, ಯಂತ್ರೋಪಕರಣ ಸಾಲ, ಕೃಷಿಯೇತರ ಸಾಲ, ಮಧ್ಯಮಾವಧಿ ಸಾಲ, ಗೊಬ್ಬರ ಸಾಲ, ಠೇವಣಿ ಆಧಾರಿತ ಸಾಲ, ವೇತನ ಆಧಾರಿತ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ , ಠೇವಣಿ ಮೇಲಿನ ಸಾಲಗಳು ವಿತರಿಸಿದ್ದು ಎಲ್ಲಾ ಸಾಲಗಳು ಸೇರಿ ತಾ.೧-೪-೨೦೨೫ ರಿಂದ ೩೧.೩.೨೦೨೬ ರವರೆಗೆ ವರದಿ ಸಾಲಿನಲ್ಲಿ ಒಟ್ಟು ರೂ. ೨೩,೩೪,೩೮,೭೦೦ ಸಾಲ ವಿತರಿಸಿದ್ದೇವೆ.
ಸದಸ್ಯರುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಕಲಾ ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸದಸ್ಯರುಗಳಿಗೆ ೧೮% ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಂಘದ ಉಪಾಧ್ಯಕ್ಷೆ ಸಿ.ಎನ್. ಪವಿತ್ರ, ನಿರ್ದೇಶಕರುಗಳಾದ ಬಿ.ಎ.ಮೊಣ್ಣಪ್ಪ, ಸಿ.ಎ.ತಮ್ಮಯ್ಯ, ಪಿ.ಪಿ. ತಿಲಕ್ಕುಮಾರ್, ಕೆ.ಕೆ.ಕುಟ್ಟಪ್ಪ, ಎಂ.ಬಿ. ತಮ್ಮಯ್ಯ, ಎಂ.ಕೆ. ದೇಚಮ್ಮ, ಕೆ.ಪಿ.ಲತೀಫ್, ಎನ್.ಕೆ.ಭುವಿನ್, ಎಂ.ಆರ್.ಗಿರೀಶ, ಹೆಚ್.ಈ. ಭೀಮಯ್ಯ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಟಿ.ಆರ್. ಪವನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.