ಮಡಿಕೇರಿ, ಅ. ೨೮: ಡಿಪಾರ್ಟ್ಮೆಂಟ್ ಸ್ಮಿತ್ಆನ್ ಟೆಕ್ಸ್ಟೈಲ್ಸ್ ಫಾರ್ ಗ್ಲೋಬಲ್ ಮಾರ್ಕೆಟ್ ಸ್ಟಾçಟಜಿ ಫಾರ್ ಅಚೀವ್ಮೆಂಟ್ ಯುಎಸ್ಡಿ ೧೦೦ ಬಿಲಿಯನ್ ಎಕ್ಸ್ಪರ್ಟ್ಸ್ ಕುರಿತು ಪ್ರಧಾನಮಂತ್ರಿ ಅವರು ರಾಷ್ಟç ಮಟ್ಟದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಜವಳಿ ರಫ್ತು ಕ್ಷೇತ್ರದಲ್ಲಿ ಪ್ರಸ್ತುತ ಇರುವ ಯುಎಸ್ಡಿ ೪೦ ಬಿಲಿಯನ್ ಡಾಲರ್ನ್ನು ೨೦೩೦ಕ್ಕೆ ಯುಎಸ್ಡಿ ೧೦೦ ಬಿಲಿಯನ್ ಡಾಲರ್ ಮಾಡಲು ಉದ್ದೇಶಿಸಿದ್ದು, ಅದರನ್ವಯ ಕೊಡಗು ಜಿಲ್ಲೆಯಲ್ಲಿ ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಒಂದು ದಿನದ ಕಾರ್ಯಾಗಾರ ಮಡಿಕೇರಿಯ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ‘ಚೇತನ ಚಿಲುಮೆ’ಯಲ್ಲಿ ನಡೆಯಲಿದೆ.
ಕಾರ್ಯಾಗಾರಕ್ಕೆ ರಫ್ತು ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಉದ್ದಿಮೆದಾರರು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.