ಮಡಿಕೇರಿ, ಅ. ೨೯: ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ಅನೇಕ ಕಡೆಗಳಲ್ಲಿ ಹುಲಿ ಹೆಜ್ಜೆ ಕಾಣಿಸಿದ್ದು ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮದ ಪೂಜಾರಿರ ಕುಟುಂಬಸ್ಥರ ಗದ್ದೆ ಹಾಗೂ ಮನೆಯ ಸುತ್ತಮುತ್ತ ಹುಲಿ ಹೆಜ್ಜೆ ಕಂಡುಬAದಿದೆ. ದೊಡ್ಡ ಗಾತ್ರದ ಹೆಜ್ಜೆಯ ಗುರುತು ಇದ್ದು ಬಲಾಢ್ಯ ಹುಲಿ ಆಗಿರುವ ಸಾಧ್ಯತೆ ಕಂಡುಬAದಿದೆ. ಅರ್ವತ್ತೊಕ್ಲು ಗ್ರಾಮದ ಸುತ್ತಮುತ್ತ ಯಾವುದೇ ಅರಣ್ಯ ಪ್ರದೇಶ ಇರುವುದಿಲ್ಲ. ಸಂಪೂರ್ಣವಾಗಿ ಕೃಷಿ ಪ್ರದೇಶ ಹೊಂದಿರುವ ಗ್ರಾಮವಾಗಿದ್ದು, ಹುಲಿ ಕಾಫಿ ತೋಟದಲ್ಲಿ ಇರುವ ಸಂಭವ ಇದ್ದು ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥ ತೆನ್ನಿರ ಮೈನಾ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಶಿವಕುಮಾರ್ ಮಾಹಿತಿ ಸಂಗ್ರಹಿಸಿದ್ದು ಹುಲಿ ಕಾರ್ಯಾಚರಣೆ ಪಡೆ ಸ್ಥಳಕ್ಕೆ ತೆರಳಿದೆ.