ಭಾಗಮಂಡಲ, ಅ. ೨೯: ಭಾಗಮಂಡಲ ಕ್ಷೇತ್ರದಲ್ಲಿ ಕಾವೇರಿ ಜಾತ್ರೆಯ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಮೊದಲಿಗೆ ಭಾಗಮಂಡಲ ದೇವಾಲಯದಿಂದ ತಕ್ಕ ಮುಖ್ಯಸ್ಥರು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗಮಂಡಲದಿAದ ಮಾರುಕಟ್ಟೆ ವರೆಗೆ ಚಂಡೆ ವಾದ್ಯ ಮೂಲಕ ತೆರಳಿದರು. ನಂತರ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ ಬಳಿಕ ಹುಂಡಿಯನ್ನು ತಂದು ಭಾಗಮಂಡಲ ದೇವಾಲಯದಲ್ಲಿ ಎಣಿಕೆ ಕಾರ್ಯ ಮಾಡಲಾಯಿತು.

ತಲಕಾವೇರಿ ದೇವಾಲಯದಲ್ಲಿ ರೂ. ೭,೦೮,೦೯೬ ಸಂಗ್ರಹವಾಗಿದ್ದರೆ ಭಾಗಮಂಡಲ ದೇವಾಲಯದಲ್ಲಿ ರೂ. ೫,೨೯,೬೧೯ ಸಂಗ್ರಹವಾಗಿದೆ. ಅನ್ನಸಂತರ್ಪಣೆ ನಿಧಿಯಲ್ಲಿ ರೂ. ೨,೧೯,೫೦೫ ಸೇರಿದಂತೆ ಒಟ್ಟು ೧೪ ಲಕ್ಷದ ೫೭ ಸಾವಿರದ ೨೨೦ ರೂಪಾಯಿ ಸಂಗ್ರಹ ಆಗಿದೆ. ಇ ಹುಂಡಿಯಲ್ಲಿನ ಸಂಗ್ರಹ ೧ ಲಕ್ಷದ ೭೭ ಸಾವಿರದ ೮೭೬ ರೂ. ಸೇರಿದಂತೆ ಒಟ್ಟು ೧೬ ಲಕ್ಷದ ೩೫ ಸಾವಿರದ ೯೬ ರೂ. ಸಂಗ್ರಹವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ೨೦ ರಿಂದ ಅಕ್ಟೋಬರ್ ೨೯ ರವರೆಗೆ ೧೭ ಲಕ್ಷದ ೮೭ ಸಾವಿರದ ೪೧೩ ರೂಪಾಯಿ ಸಂಗ್ರಹವಾಗಿತ್ತು. ಪ್ರಸಕ್ತ ವರ್ಷ ಅಕ್ಟೋಬರ್ ಒಂದರಿAದ ೨೯ ರವರೆಗೆ ಒಟ್ಟು ೧೬ ಲಕ್ಷದ ೩೫ ಸಾವಿರದ ೯೬ ರೂಪಾಯಿ ಸಂಗ್ರಹವಾಗಿದೆ.

ಎಣಿಕೆ ಕಾರ್ಯಕ್ಕೆ ಸ್ಥಳೀಯ ಮಹಿಳಾ ಸಂಘದ ಸದಸ್ಯರು, ಹೋಂ ಗಾರ್ಡ್ ಗಳು ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಸಹಕರಿಸಿದರು. ಪೊಲೀಸ್ ಸಿಬ್ಬಂದಿ ಹಾಗೂ ವೀಡಿಯೋ ಚಿತ್ರೀಕರಣದೊಂದಿಗೆ ಎಣಿಕೆ ಮಾಡಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರಥ್ಯು, ಸದಸ್ಯರಾದ ಚೋಡುಮಡ ಎ. ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಹರ್ಷ, ಕೆ.ಎ. ತಿಮ್ಮಯ್ಯ, ಕೆದಂಬಾಡಿ ಜಿ. ರಘುನಾಥ್, ಎಂ.ಸಿ. ಲಕ್ಷö್ಮಣ, ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಪಾರುಪತ್ತೆಗಾರ ಪೊನ್ನಣ್ಣ ಪಾಲ್ಗೊಂಡಿದ್ದರು.