ಮಡಿಕೇರಿ, ಅ. ೨೯: ಮಡಿಕೇರಿ - ಸುಂಟಿಕೊಪ್ಪ ನಡುವಿನ ಇಬ್ಬನಿ ರೆಸಾರ್ಟ್ ಸಮೀಪದ ಹೆದ್ದಾರಿಯಲ್ಲಿ ಹೆಬ್ಬಾವು ನಿಧಾನವಾಗಿ ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇಂದು ಸಂಜೆ ಈ ದೃಶ್ಯ ಕಂಡುಬAದಿದ್ದು, ಹೆಬ್ಬಾವು ರಸ್ತೆ ದಾಟುವ ಸಂದರ್ಭದಲ್ಲಿ ಬಂದ ವಾಹನಗಳ ಚಾಲಕರು ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಹೆಬ್ಬಾವು ನಿರಾತಂಕವಾಗಿ ತೆರಳಲು ಅನುವು ಮಾಡಿಕೊಟ್ಟರು.