ಮಡಿಕೇರಿ ಅ.೩೧ : ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ನಗರದ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿತ ೨ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಉತ್ಸವದಲ್ಲಿ ವಿವಿಧ ವಿಭಾಗಗಳ ಪಂದ್ಯಾಟಗಳು ರೋಚಕವಾಗಿ ನಡೆದಿದ್ದು, ಹಲವು ತಂಡಗಳು ಉತ್ತಮ ಪ್ರದರ್ಶನ ನೀಡಿವೆ.
ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಅಪ್ಪಚ್ಚಕವಿ ವಿದ್ಯಾಲಯ ತಂಡವು ಯುಟಿಎಸ್ಸಿ ಅಕಾಡೆಮಿ ವಿರುದ್ಧ ೧-೦ ಗೋಲಿನಿಂದ ಗೆಲುವು ಸಾಧಿಸಿತು. ಪ್ರೀತಂ ಗೋಲು ದಾಖಲಿಸಿದರು.
ಎರಡನೇ ಪಂದ್ಯದಲ್ಲಿ ಎಂಆರ್ಎಫ್ ಮೂರ್ನಾಡು ತಂಡವು ಪಡಿಯಾಡ್ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಮಣಿಕಂಠ ೨, ಕೌಶಿಕ್ ೧ ಹಾಗೂ ಶ್ರೇಯಸ್ ೧ ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ತಂಡವು ಮುಂಬೈ ರಿಪಬ್ಲಿಕನ್ ವಿರುದ್ಧ ೩-೦ ಗೋಲುಗಳ ಜಯ ಸಾಧಿಸಿತು. ವೇದಾಂತ್, ಅಧ್ರೇಶ್ ಹಾಗೂ ಸಚಿನ್ ತಲಾ ಒಂದು ಗೋಲು ಗಳಿಸಿದರು.
ಬರ್ಲಿ ಟೈಗರ್ಸ್ ಮತ್ತು ಕೊಡವ ಹಾಕಿ ಅಕಾಡೆಮಿ ನಡುವಿನ ಪಂದ್ಯದಲ್ಲಿ ಉಮೇಶ್ ಮುರುಗಾರ್ ೨ ಹಾಗೂ ಭರತ್ ಕೆ.ಕೆ. ೧ ಗೋಲು ದಾಖಲಿಸಿದರು.
ಕೂರ್ಗ್ ಡೈನಾಮಿಕ್ಸ್ ತಂಡವು ಭಗವತಿ ೧೧ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿತು. ಕೂರ್ಗ್ ಡೈನಾಮಿಕ್ಸ್ ಪರ ಚೇತನ್ ೨ ಹಾಗೂ ಕುಟ್ಟಪ್ಪ ೧ ಗೋಲು ದಾಖಲಿಸಿದರು. ಭಗವತಿ ೧೧ ಪರ ಬೋಸ್ ಚೆಂಗಪ್ಪ ಮತ್ತು ಸಚಿನ್ ಅಯ್ಯಪ್ಪ ತಲಾ ಒಂದು ಗೋಲು ಗಳಿಸಿದರು.
ಕೇರಳ ಮಾಸ್ಟರ್ಸ್ ಮೆನ್ ಮತ್ತು ಭಗವತಿ ೧೧ ನಡುವಿನ ಪಂದ್ಯ ೧-೧ ಗೋಲುಗಳಿಂದ ಸಮಬಲಗೊಂಡಿತು. ಕೇರಳ ಪರ ಅಹಿಲ್ ಒಂದು ಗೋಲು ದಾಖಲಿಸಿದರು.
ಮಹಿಳೆಯರ ವಿಭಾಗದಲ್ಲಿ ಕೂರ್ಗ್ ವಂಡರ್ ವುಮೆನ್ ತಂಡವು ಕೇರಳ ಮಾಸ್ಟರ್ಸ್ ವಿರುದ್ಧ ೨-೦ ಗೋಲುಗಳಿಂದ ಗೆಲುವು ಸಾಧಿಸಿತು. ಪ್ರೇಮಾ ಹಾಗೂ ಕೃತಿಕಾ ತಲಾ ಒಂದು ಗೋಲು ಗಳಿಸಿದರು.
ರಾಯಲ್ ಚಾಲೆಂಜರ್ಸ್ ತಂಡವು ಕೇರಳ ಮಾಸ್ಟರ್ಸ್ ವಿರುದ್ಧ ೫-೦ ಗೋಲುಗಳ ಭರ್ಜರಿ ಜಯ ಸಾಧಿಸಿತು. ಲಕ್ಷಿö್ಮ, ಮಾನಸ, ಎಲಿನಾ, ಸರಿತಾ ಹಾಗೂ ಹರಿಣಾಕ್ಷಿ ತಲಾ ಒಂದು ಗೋಲು ದಾಖಲಿಸಿದರು.
ಕೂರ್ಗ್ ವಂಡರ್ ವುಮೆನ್ ತಂಡದ ಪರ ಮತ್ತೊಂದು ಪಂದ್ಯದಲ್ಲಿ ಕೃತಿಕಾ ೧, ಉಷಾ ೨ ಹಾಗೂ ಶೃತಿ ೧ ಗೋಲು ದಾಖಲಿಸಿದರು.
ಆರ್ಸಿಬಿ ಮತ್ತು ಕೇರಳ ನಡುವಿನ ಮತ್ತೊಂದು ಪಂದ್ಯದಲ್ಲಿ ಬಬಿತಾ ಹಾಗೂ ಮಾನಸ ತಲಾ ಒಂದು ಗೋಲು ದಾಖಲಿಸಿದರು.
ಟೈಗರ್ಸ್ ಬಾಳೆಲೆ ಮತ್ತು ಯುವ ಮಾಸ್ಟರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಸಂತೋಷ್ ಕೆ.ಕೆ. ಒಂದು ಗೋಲು ದಾಖಲಿಸಿದರು.
ಇಂದು ಸಮಾರೋಪ
ಸಮಾರೋಪ ಸಮಾರಂಭ ನ.೧ರಂದು ಮಧ್ಯಾಹ್ನ ೨.೧೫ಕ್ಕೆ ಟರ್ಫ್ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಹಾಗೂ ಕೇರಳ ಹಾಕಿ ಕಾರ್ಯದರ್ಶಿ ನಿಯಾಜ್ ಕೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಗೌರವ ಅತಿಥಿಗಳಾಗಿ ವಿಶ್ವಕಪ್ ಚಿನ್ನದ ಪದಕ ವಿಜೇತ ಪೈಕೇರ ಕಾಳಯ್ಯ, ಒಲಿಂಪಿಯನ್ ಕರ್ನಲ್ ಬಿ.ಕೆ. ಸುಬ್ರಮಣಿ, ಒಲಿಂಪಿಯನ್ ಸಿ.ಎಸ್. ಪೂಣಚ್ಚ, ವಿಶ್ವಕಪ್ ಆಟಗಾರ ಕೆ.ಕೆ. ಪೂಣಚ್ಚ, ಕ್ರೀಡಾ ಬರಹಗಾರ ಚೆಪ್ಪುಡಿರ ಕಾರ್ಯಪ್ಪ, ಕೂರ್ಗ್ ಹೊಟೇಲ್ ಮತ್ತು ರೆಸಾರ್ಟ್À ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಕೂರ್ಗ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಧನ್ಯ ಸುಬ್ಬಯ್ಯ, ಕೇರಳ ಹಾಕಿ ಉಪಾಧ್ಯಕ್ಷ ಹಶೀರ್ ಪೊನ್ಮಾನಿಚಿ ಹಾಗೂ ಯುಟಿಎಸ್ಸಿ ಸಮಿತಿ ಸದಸ್ಯ ಜಿನೋಸ್ ಬಶೀರ್ ಉಪಸ್ಥಿತರಿರಲಿದ್ದಾರೆ.