ಸುAಟಿಕೊಪ್ಪ, ಅ.೩೧: ಕುಶಾಲನಗರ ತಾಲೂಕು ರಾಷ್ಟಿçÃಯ ಸ್ಚಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಪಥಸಂಚಲನ ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ಸಂಜೆ ನಡೆಯಿತು.

ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಆರ್.ಕೆ. ಬಡಾವಣೆಯಲ್ಲಿ ಪುಷ್ಪನಮನ ನಡೆಸುವ ಮೂಲಕ ಪ್ರಾರ್ಥನೆಯೊಂದಿಗೆ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಘೋಷ್ ವಾದ್ಯದ ಮುಂದಾಳತ್ವದಿAದ ಶಿಸ್ತುಬದ್ಧವಾಗಿ ಸಮವಸ್ತçದೊಂದಿಗೆ ನಡೆದ ಪಥಸಂಚಲನ ಗದ್ದೆಹಳ್ಳ ಮಾರ್ಗವಾಗಿ ಪಟ್ಟಣದ ಮೂಲಕ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಮಾರುಕಟ್ಟೆ ಮಾರ್ಗವಾಗಿ ತೆರಳಿ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಸಂಪನ್ನಗೊAಡಿತು.

ಪಥಸAಚಲನದ ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು ಪುಷ್ಪರ್ಚನೆ ಮಾಡುವ ಮೂಲಕ ಪಥಸಂಚಲನದಲ್ಲಿ ಭಾಗವಹಿಸಿದ ಸ್ವಯಂಸೇವಕರಿಗೆ ಸ್ವಾಗತ ನೀಡಿದರು. ಕುಶಾಲನಗರ ತಾಲೂಕಿಗೆ ಸೇರಿದ ಸುಂಟಿಕೊಪ್ಪ, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಕುಶಾಲನಗರ, ನಾಕೂರು ಕಾನ್‌ಬೈಲ್, ಕಂಬಿಬಾಣೆ, ಚೆಟ್ಟಳ್ಳಿ, ಕೆದಕಲ್, ಮತ್ತಿಕಾಡು ಸೇರಿದಂತೆ ಇತರ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆರ್.ಎಸ್.ಎಸ್ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಸುಂಟಿಕೊಪ್ಪ ಪಿಎಸ್‌ಐ ಮೋಹನ್‌ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.