ಮಡಿಕೇರಿ ಮೇ 14 : ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 21 ನೇ ವರ್ಷದ ಪ್ರತಿಷ್ಠಿತ ದಿ|ಡಿ.ಶಿವಪ್ಪ ಜ್ಞಾಪಕಾಥರ್À ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಇದೇ ಮೇ 20 ರಿಂದ 29 ರವರೆಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಎ.ಶ್ರೀಧರ್ ಕುಮಾರ್ ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು. ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಡಿ. ವಿನೋದ್ ಶಿವಪ್ಪ ಅವರು ತಮ್ಮ ತಂದೆ ಡಿ. ಶಿವಪ್ಪನವರ ಸ್ಮರಣಾರ್ಥ 1996 ರಿಂದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವ ಮೂಲಕ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ ಎಂದರು.
ಮೇ 20 ರಂದು ಆರಂಭಗೊಳ್ಳುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ, ಹೊರ ರಾಜ್ಯ ಹಾಗೂ ಕೊಡಗು ಸೇರಿದಂತೆ 22 ಖ್ಯಾತ ಫುಟ್ಬಾಲ್ ತಂಡಗಳು ಪಾಲ್ಗೊಳ್ಳುತ್ತಿವೆ. ಎ ಮತ್ತು ಬಿ ಗುಂಪುಗಳಲ್ಲಿ ನಾಕ್ ಜೌಟ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯ ಅಂತಿಮ ಪಂದ್ಯ ಮೇ 29 ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯಲಿದೆಯೆಂದು ಎ.ಶ್ರೀಧರ್ ಕುಮಾರ್ ತಿಳಿಸಿದರು.
ಪಂದ್ಯಾವಳಿಯ ಎ ಗುಂಪಿನಲ್ಲಿ ಬೆಂಗಳೂರಿನ ಆರ್ಮಿ ಬಾಯ್ಸ್, ಮಂಡ್ಯದ ಬೆನಕ, ಮಂಗಳೂರಿನ ತಲಪ್ಪಾಡಿ ತಂಡ, ಮೈಸೂರಿನ ಶೀತಲ್, ಪಾಲಿಬೆಟ್ಟದ ನೆಹರು, ಸುಂಟಿಕೊಪ್ಪದ ಬಿಬಿಸಿ, ಬೈಲುಕೊಪ್ಪದ ಟಿಡಿಎಲ್ ಎಫ್‍ಸಿ, ಕೇರಳದ ಇರ್‍ಟ್ಟಿಯ ಇಕೆಎನ್ ಸ್ಪೋರ್ಟಿಂಗ್, ಕ್ಯಾಲಿಕಟ್‍ನ ಕಾಸ್‍ಮೋಸ್, ಕುಂಬ್ಳೆಯ ಬ್ರದರ್ಸ್ ಎಫ್‍ಸಿ ಮತ್ತು ಬೆಂಗಳೂರಿನ ಜಾಲಿ ಬ್ರದರ್ಸ್ ತಂಡಗಳು ಪಾಲ್ಗೊಳ್ಳಲಿವೆ.
ಬಿ ಗುಂಪಿನಲ್ಲಿ ಬೆಂಗಳೂರಿನ ಹೆಚ್‍ಎಂಟಿ ಬಾಯ್ಸ್, ಉಪ್ಪಳದ ಸಿಟಿಜನ್ ಸ್ಪೋಟ್ರ್ಸ್, ಮಂಗಳೂರಿನ ನಾರಾಯಣ ಗುರು ಎಫ್‍ಸಿ ಹೆಜಮಾಡಿ, ಸುಂಟಿಕೊಪ್ಪದ ಪನ್ಯ, ಮೈಸೂರಿನ ಅಶೋಕ, ಕೊಡಗರಹಳ್ಳಿ ನೇತಾಜಿ, ಸುಂಟಿಕೊಪ್ಪ ಗದ್ದೆಹಳ್ಳದ ಆಮಿಟಿ, ಮಂಡ್ಯದ ಸ್ವರ್ಣ, ಮಂಗಳೂರಿನ ಸ್ಪೋರ್ಟಿಂಗ್ ಎಫ್‍ಸಿ, ಬೆಂಗಳೂರಿನ ಈಗಲ್ ಮತ್ತು ಕೇರಳದ ಕೊಚ್ಚಿನ್ ಎಫ್‍ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಹಾಸನ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರಾದ ಎ. ಲೋಕೇಶ್ ಕುಮಾರ್ ಉದ್ಘಾಟಿಸಲಿದ್ದು, ಧ್ವಜಾರೋಹಣ ವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ನೆರವೇರಿಸಲಿ ದ್ದಾರೆ. ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಮತ್ತು ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ 20 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ. ಪಂದ್ಯಾವಳಿಯ ಆಯೋಜನೆಗೆ 2.50 ಲಕ್ಷದಿಂದ 3 ಲಕ್ಷ ವೆಚ್ಚವಾಗಲಿದ್ದು, ಪ್ರಾಯೋಜಕ ರಾದ ಡಿ. ವಿನೋದ್ ಶಿವಪ್ಪ ಹಾಗೂ ದಾನಿಗಳ ಸಹಕಾರ ಪಡೆಯಲಾಗುತ್ತಿದೆ ಎಂದು ಎ.ಶ್ರೀಧರ್ ಕುಮಾರ್ ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕ್ರೀಡಾ ಸಚಿವರು, ಜಿಲ್ಲೆಯ ಶಾಸಕರು, ರಾಜ್ಯ ಮತ್ತು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿ ಗಳು, ದಾನಿಗಳಾದ ಡಿ. ವಿನೋದ್ ಶಿವಪ್ಪ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಎಂ.ಎಸ್. ರವಿ, ಗೌರವಾಧ್ಯಕ್ಷ, ಎನ್.ಎಸ್. ಆದಿಶೇಷ, ಗೌರವ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಕುಮಾರ್, ಹಾಗೂ ನಿರ್ದೇಶಕ ಟಿ.ವಿ. ಪ್ರಸನ್ನ ಉಪಸ್ಥಿತರಿದ್ದರು.