ಕರಿಕೆ, ಜೂ. 27: ಮಳೆಗಾಲ ಆರಂಭವಾದೊಡನೆ ಜಲಧಾರೆಗಳು ಭೋರ್ಗರೆಯಲು ಆರಂಭಿಸಿವೆ.ಭಾಗಮಂಡಲ-ಕರಿಕೆ ಅಂತರ್ರಾಜ್ಯ ಹೆದ್ದಾರಿಯಲ್ಲಿ ಜಲಧಾರೆಗಳು ಭಾರ್ಗರೆಯುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಪ್ರವಾಸಿಗರು ಹಾಗೂ ಪ್ರಯಾಣಿಕರು ತಲಕಾವೇರಿ ವನ್ಯಧಾಮದ ಮಧ್ಯೆ ಪ್ರಯಾಣಿಸುವ ಸಂದರ್ಭ ಜಲಧಾರೆಗಳ ಸೊಬಗನ್ನು ಸವಿಯಲಾರಂಭಿಸಿದ್ದಾರೆ. ರಸ್ತೆಯುದ್ದಕ್ಕೂ ಹಲವು ಜಲಧಾರೆಗಳು ಮೈದುಂಬಿ ದುಮ್ಮಿಕ್ಕುತ್ತಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.ಆದರೆ ದುರಾದೃಷ್ಟವೆಂದರೆ ಜಲಧಾರೆಗಳ ಭೋರ್ಗರೆತವನ್ನು ಸವಿಯಲು ಬರುವ ಪ್ರವಾಸಿಗರು ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಅಲ್ಲೇ ಬಿಟ್ಟು ತೆರಳುತ್ತಿರುವದು ಸ್ವಚ್ಛ ಭಾರತ ಯೋಜನೆಗೆ ಒಂದು ಸವಾಲೇ ಎನ್ನಬಹುದು. -ಸುಧೀರ್, ಕರಿಕೆ